Publish Date: Sun, 24 Nov 2019 (09:09 IST)
Updated Date: Sun, 24 Nov 2019 (09:11 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ವಿವಾಹ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದ್ದು, ವಿವಾಹ ಪೂರ್ವ ಕಾರ್ಯಕ್ರಮಗಳು ನಿನ್ನೆಯೇ ಆರಂಭವಾಗಿದೆ.
ಧ್ರುವ ಸರ್ಜಾ ಮನೆಯಲ್ಲಿ ನಿನ್ನೆ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ ನೆರವೇರಿದ್ದು, ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಆತ್ಮೀಯರು ಬಂದು ಧ್ರುವ ಸರ್ಜಾಗೆ ಹರಸಿ ಹೋಗಿದ್ದಾರೆ.
ಇಂದು ವಿವಾಹ ಕಾರ್ಯಕ್ರಮ ನಡೆಯಲಿದ್ದು, ತಮ್ಮ ಅಭಿಮಾನಿಗಳನ್ನೇ ವಿಐಪಿ ಅತಿಥಿಗಳು ಎಂದಿರುವ ಧ್ರುವ ಸರ್ಜಾ ನಾಳೆಯ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ನೀಡಿದ್ದಾರೆ.