Publish Date: Fri, 22 Nov 2019 (09:04 IST)
Updated Date: Fri, 22 Nov 2019 (09:06 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾ ಇನ್ನೇನು ಕೊನೆಯ ಹಂತದಲ್ಲಿದ್ದು, ಅದಾದ ಬಳಿಕ ಜೇಮ್ಸ್ ಸಿನಿಮಾ ಮಾಡಲಿದ್ದಾರೆ.
ಇದರ ಬಳಿಕ ಪುನೀತ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪವರ್ ಸ್ಟಾರ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
ಅದೂ ರಾಮ ರಾಮ ರೇ ಎಂಬ ಅದ್ಭುತ ಸಿನಿಮಾ ನಿರ್ದೇಶಿಸಿದ್ದ ಡಿ ಸತ್ಯಪ್ರಕಾಶ್ ನಿರ್ದೇಶನದಲ್ಲಿ ಎನ್ನಲಾಗಿದೆ. ಈ ಸಿನಿಮಾಗೆ ಇನ್ನೂ ಕೆಲಸಗಳು ನಡೆಯುತ್ತಿದೆಯಷ್ಟೇ. ಇದು ಮುಂದಿನ ವರ್ಷ ಅಂದರೆ 2020 ರಲ್ಲಿ ಸೆಟ್ಟೇರುವ ನಿರೀಕ್ಷೆಯಿದೆ. ಅಂದ ಹಾಗೆ ಸತ್ಯಪ್ರಕಾಶ್ ಗೆ ಇದು ಕೇವಲ ಮೂರನೇ ಸಿನಿಮಾವಾಗಿರಲಿದೆ. ಎಲ್ಲಾ ಸರಿ ಹೋದರೆ ಪುನೀತ್ ಸ್ವಂತ ಬ್ಯಾನರ್ ನಲ್ಲೇ ಈ ಸಿನಿಮಾ ಸೆಟ್ಟೇರಲಿದೆ.
Krishnaveni K
Publish Date: Fri, 22 Nov 2019 (09:04 IST)
Updated Date: Fri, 22 Nov 2019 (09:06 IST)