Select Your Language

Notifications

webdunia
webdunia
webdunia
webdunia

ನೀನಾಸಂ ಸತೀಶ್ ರ ‘ಬ್ರಹ್ಮಚಾರಿ’ಯಲ್ಲಿದೆ ಪತಿ-ಪತ್ನಿಯರ ಕಹಾನಿ!

ನೀನಾಸಂ ಸತೀಶ್ ರ ‘ಬ್ರಹ್ಮಚಾರಿ’ಯಲ್ಲಿದೆ ಪತಿ-ಪತ್ನಿಯರ ಕಹಾನಿ!
ಬೆಂಗಳೂರು , ಭಾನುವಾರ, 24 ನವೆಂಬರ್ 2019 (09:06 IST)
ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ನವಂಬರ್ 29 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


ಸತೀಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್, ಟ್ರೈಲರ್ ನೋಡಿ ಕತೆ ಏನಿರಬಹುದು ಎಂದು ಪ್ರೇಕ್ಷಕರಿಗೆ ಸುಳಿವು ಸಿಕ್ಕಿದೆ. ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ನಡುವಿನ ಖಾಸಗಿ ಬದುಕಿನಲ್ಲಿ ಬರುವ ಗೊಂದಲಗಳನ್ನು ಹಾಸ್ಯಮಯವಾಗಿ ಹೇಳಲಾಗಿದೆ.

ಸದಾ ಪ್ರಯೋಗಾತ್ಮಕ ಚಿತ್ರಗಳಿಗೆ ತಮ್ಮನ್ನು ತೊಡಗಿಸಿಕೊಂಡಿರುವ ನೀನಾಸಂ ಸತೀಶ್ ಮಾಡುತ್ತಿರುವ ಮತ್ತೊಂದು ವಿಭಿನ್ನ ಪಾತ್ರವಿದು. ದತ್ತಣ್ಣ, ಪದ್ಮಜಾ ರಾವ್ ರಂತಹ ಹಿರಿಯ ಕಲಾವಿದರೂ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ‘99’ ಸಿನಿಮಾ ಇಂದು ಕಿರುತೆರೆಯಲ್ಲಿ