Publish Date: Sat, 23 Nov 2019 (08:56 IST)
Updated Date: Sat, 23 Nov 2019 (08:59 IST)
ಬೆಂಗಳೂರು: ಡಾ.ರಾಜ್ ಕುಮಾರ್ ಮೊಮ್ಮಗ ಧ್ರುವನ್ ನಾಯಕರಾಗಿ ನಟಿಸಲಿರುವ ಹೊಸ ಸಿನಿಮಾ ಮುಹೂರ್ತ ಕಾರ್ಯಕ್ರಮ ನಿನ್ನೆ ನಗರದಲ್ಲಿ ನೆರವೇರಿದೆ.
ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಜತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿ ಶಿವಣ್ಣ ಕ್ಲಾಪ್ ಮಾಡಿದರೆ ದರ್ಶನ್ ಕ್ಯಾಮರಾ ಆನ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಈ ವೇಳೆ ಒಟ್ಟಾಗಿ ಪೋಸ್ ನೀಡಿದ ಇಬ್ಬರು ದಿಗ್ಗಜ ಸ್ಟಾರ್ ಗಳು ಬಳಿಕ ಮಾಧ್ಯಮಗಳೊಂದಿಗೂ ಜತೆಯಾಗಿಯೇ ಮಾತನಾಡಿದರು. ದರ್ಶನ್ ಮತ್ತು ಶಿವಣ್ಣ ಆತ್ಮೀಯರಾಗಿದ್ದರೂ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ. ಇದೀಗ ಒಟ್ಟಾಗಿ ಸಿಕ್ಕಾಗ ಮಾಧ್ಯಮದವರೂ ಮುಂದೊಂದು ದಿನ ನಿಮ್ಮನ್ನು ಒಂದೇ ಸಿನಿಮಾದಲ್ಲಿ ನೋಡಬಹುದೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಇಬ್ಬರೂ ಒಳ್ಳೆ ಕತೆ ಬಂದರೆ ಗ್ಯಾರಂಟಿ ಮಾಡುತ್ತೇವೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ.