Publish Date: Sun, 24 Nov 2019 (14:33 IST)
Updated Date: Sun, 24 Nov 2019 (14:34 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ದಿನ ಅಭಿಮಾನಿಗಳ ಮೆಚ್ಚಿನ ಅಂಬರೀಶ್ ಇಹಲೋಕ ತ್ಯಜಿಸಿದ್ದರು.
ಮೊನ್ನೆಯಷ್ಟೇ ಅವರ ವಾರ್ಷಿಕ ಪುಣ್ಯ ತಿಥಿ ಕಾರ್ಯಕ್ರಮವನ್ನು ಕುಟುಂಬ ವರ್ಗ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಇಂದು ಅವರು ನಮ್ಮನ್ನಗಲಿ ಒಂದು ವರ್ಷವಾದ ಪ್ರಯುಕ್ತ ಅಭಿಮಾನಿಗಳು ಹಲವೆಡೆ ಅನ್ನದಾನ ಮಾಡಿ ಅಂಬಿಗೆ ನಮನ ಸಲ್ಲಿಸುತ್ತಿದ್ದಾರೆ.