Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಜೂನಿಯರ್ ಚಿರುಗೆ 'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ

webdunia
ಶುಕ್ರವಾರ, 3 ಸೆಪ್ಟಂಬರ್ 2021 (12:13 IST)
ಬೆಂಗಳೂರು : ನಟಿ ಮೇಘನಾ ಕುಟುಂಬದಲ್ಲಿಂದು ಸಂಭ್ರಮ ಮನೆ ಮಾಡಿದೆ. ಏಕೆಂದರೆ ಇಂದು ಜ್ಯೂನಿಯರ್ ಚಿರುವಿನ ನಾಮಕರಣ. ದಿವಂಗತ ನಟ ಚಿರಂಜೀವಿ ಸರ್ಜಾ ಪುತ್ರನ ಹೆಸರು ಬಹಿರಂಗವಾಗಿದೆ.

ಜ್ಯೂನಿಯರ್ ಚಿರುಗೆ 'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂಭ್ರಮದಲ್ಲಿ ಸರ್ಜಾ ಕುಟುಂಬ ಭಾಗಿಯಾಗಿದೆ.
ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಮೇಘನಾ ರಾಜ್ ಅಜ್ಜಿ ಲಕ್ಷ್ಮಿ ದೇವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. 10 ತಿಂಗಳ ನಂತರ ಮಗನಿಗೆ ನಾಮಕರಣ ಮಾಡಲಾಗಿದೆ. ನಗರದ ಚಾನ್ಸರಿ ಪೆವಿಲಿಯನ್ ಹೊಟೆಲ್ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ. ಇಷ್ಟು ದಿನ ಜ್ಯೂ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿ ಇನ್ಮುಂದೆ ರಾಯನ್ ರಾಜ್ ಸರ್ಜಾ ಹೆಸರಿನಿಂದ ಚಿರಪರಿಚಿತವಾಗಲಿದೆ.
ಅಂದಹಾಗೆ ಸಂಸ್ಕೃತದಲ್ಲಿ ರಾಯನ್ ಅಂದ್ರೆ ಯುವರಾಜ ಎಂಬ ಅರ್ಥ ಬರುತ್ತದೆ. ನಾಮಕರಣ ಹಿನ್ನೆಲೆಯಲ್ಲಿ ಚಿರು ಕುಟುಂಬದಲ್ಲಿ ಸಂತೋಷ ಇಮ್ಮಡಿಯಾಗಿದ್ದು, ಚಿರು ಮಗುವಿಗೆ ಬಂಧುಬಳಗದವರು ಶುಭ ಹಾರೈಸುತ್ತಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರೀಕರಣದಲ್ಲಿ ಕುದುರೆ ಸಾವು: ಮಣಿರತ್ನಂ ವಿರುದ್ಧ ಎಫ್ಐಆರ್