Publish Date: Mon, 30 Aug 2021 (10:14 IST)
Updated Date: Mon, 30 Aug 2021 (10:29 IST)
ಬೆಂಗಳೂರು: ಕೃಷ್ಣಜನ್ಮಾಷ್ಠಮಿ ನಿಮಿತ್ತ ನಟಿ ಮೇಘನಾ ರಾಜ್ ತಮ್ಮ ಪುತ್ರನಿಗೆ ಕೃಷ್ಣನ ವೇಷ ಹಾಕಿಸಿ ಖುಷಿಪಟ್ಟಿದ್ದಾರೆ.
ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮೇಘನಾ, ನನ್ನ ಬೆಣ್ಣೆ ಮುದ್ದು ಬಂಗಾರ, ಶ್ರೀಕೃಷ್ಣ ಜನ್ಮಾಷ್ಠಮಿಯ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.
ಇನ್ನು, ಜ್ಯೂನಿಯರ್ ಚಿರು ಕೃಷ್ಣನ ಅವತಾರ ನೋಡಿ ನಟಿ ಐಶ್ವರ್ಯಾ ಸರ್ಜಾ, ಸಂಯುಕ್ತಾ ಹೊರನಾಡು ಸೇರಿದಂತೆ ಅನೇಕರು ಇಷ್ಟಪಟ್ಟು ಕಾಮೆಂಟ್ ಮಾಡಿದ್ದಾರೆ. ಇಂದು ಅಷ್ಠಮಿ ನಿಮಿತ್ತ ಹಲವು ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.