Select Your Language

Notifications

webdunia
webdunia
webdunia
Sunday, 6 April 2025
webdunia

ಅಭಿಮಾನಿಗಳ ಜೊತೆ ಬರ್ತ್ಡೇ ಆಚರಿಸಿಕೊಳುತ್ತಿಲ್ಲ ಸುದೀಪ್

ಕೋವಿಡ್
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (10:09 IST)
ಕೋವಿಡ್ ನಂತರ ಬಹುತೇಕ ಸ್ಟಾರ್ ನಟರು ತಮ್ಮ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟರು ಇತ್ತೀಚಿನ ಎರಡು ವರ್ಷಗಳಿಂದ ಹುಟ್ಟುಹಬ್ಬದಿಂದ ದೂರ ಉಳಿಯುತ್ತಿದ್ದಾರೆ. ಪ್ರೀತಿಯಿಂದ ತಮ್ಮ ಮನೆ ಬಳಿ ಬರುವ ಅಭಿಮಾನಿಗಳಲ್ಲಿ “ದೂರದಿಂದಲೇ ಶುಭ ಹಾರೈಸಿ’ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಈಗ ನಟ ಸುದೀಪ್ ಕೂಡಾ ಈ ಬಾರಿ ಅಭಿಮಾನಿಗಳ ಜೊತೆ ಬರ್ತ್ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 02 ಸುದೀಪ್ ಅವರ ಹುಟ್ಟುಹಬ್ಬ. ಈಗಾಗಲೇ ಅಭಿಮಾನಿಗಳು ಸಂಭ್ರಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ನಡುವೆಯೇ ಸುದೀಪ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅದು ಬರ್ತ್ಡೇ ದಿನ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು.
ಈ ಬಗ್ಗೆ ಅಭಿಮಾನಿಗಳಲ್ಲಿ ಸುದೀಪ್ ಮನವಿ ಮಾಡಿರೋದು ಹೀಗೆ: ನನ್ನೆಲ್ಲ ಅಭಿಮಾನಿ ಸ್ನೇಹಿತರಲ್ಲಿ ಮನವಿ.ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರನ್ನು ಭೇಟಿ ಆಗಲು ಆಗುತ್ತಿಲ್ಲ.ಕ್ಷಮೆ ಇರಲಿ. ಮುಂದೆ ಪರಿಸ್ಥಿತಿ ಸುಧಾರಿಸಿದ ನಂತರ ನಿಮ್ಮೆಲ್ಲರನ್ನೂ ಭೇಟಿ ಆಗುತ್ತೇನೆ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ. ನಿಮ್ಮ ಆರೋಗ್ಯವೇ’ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸುದೀಪ್ ಅವರ ಬರ್ತ್ಡೇ ಸಿಡಿಪಿಯನ್ನುಕ್ರಿಕೆಟಿಗ ಅನಿಲ್ಕುಂಬ್ಳೆ ಬಿಡುಗಡೆಗೊಳಿಸಿದ್ದರು. ಇನ್ನು, ಬರ್ತ್ಡೇ ಹಿನ್ನೆಲೆಯಲ್ಲಿ “ವಿಕ್ರಾಂತ್ ರೋಣ’ ಚಿತ್ರದ ಗ್ಲಿಮ್ಸ್ ವಿಡಿಯೋ ರಿಲೀಸ್ ಮಾಡಲಿದೆ ಚಿತ್ರತಂಡ. “ಡೆಡ್ಮ್ಯಾನ್ಸ್ ಆಯಂಥಮ್ ಸಾಂಗ್’ ಕೂಡಾ ಬಿಡುಗಡೆ ಆಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋಣ್ ಪ್ರತಾಪ್ ನನ್ನ ತಮ್ಮ ಎಂದ ಒಳ್ಳೆ ಹುಡುಗ ಪ್ರಥಮ್ ಟ್ರೋಲ್