Select Your Language

Notifications

webdunia
webdunia
webdunia
webdunia

ಎರಡನೇ ಮಗನಿಗೆ ಹೆಸರಿಟ್ಟ ಕರೀನಾ ಕಪೂರ್-ಸೈಫ್ ಅಲಿ ಖಾನ್ ದಂಪತಿ..!

ಎರಡನೇ ಮಗನಿಗೆ ಹೆಸರಿಟ್ಟ ಕರೀನಾ ಕಪೂರ್-ಸೈಫ್ ಅಲಿ ಖಾನ್ ದಂಪತಿ..!
Bangalore , ಶುಕ್ರವಾರ, 9 ಜುಲೈ 2021 (21:48 IST)
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರ ಎರಡನೇ ಮಗನ ನಾಮಕರಣದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಳೆದ ಹಲವಾರು ದಿನಗಳಿಂದ ಕರೀನಾ ಕಪೂರ್ 2ನೇ ಮಗನಿಗೆ ಹೆಸರಿಟ್ಟಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 


































ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ತೈಮೂರ್ ತಮ್ಮನಿಗೆ ಹೆಸರಿಡಲಾಗಿದೆಯಂತೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರ 2ನೇ ಮಗುವಿಗೆ ಹೆಸರಿಡುವ ವಿಷಯ ಕಳೆದ ಕೆಲ ಸಮಯದಿಂದ ತುಂಬಾ ಸುದ್ದಿಯಲ್ಲಿದೆ.ತೈಮೂರ್ ಅಲಿ ಖಾನ್ ತಮ್ಮನಿಗೆ ಈಗಾಗಲೇ ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ.ಈ ಹಿಂದೆ ತೈಮೂರ್ ಅಲಿ ಖಾನ್ಗೆ ಹೆಸರಿಟ್ಟಾಗ ತುಂಬಾ ವಿರೋಧ ವ್ಯಕ್ತವಾಗಿತ್ತು.ಇದೇ ಕಾರಣದಿಂದಾಗಿ ಈಗ ಎರಡನೇ ಮಗುವಿನ ನಾಮಕರಣದ ವಿಷಯ  ಮತ್ತೆ ಚರ್ಚೆಗೆ ಬಂದಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ 2ನೇ ಮಗನಿಗೆ ಜೇ (ಎeh) ಎಂದು ಹೆಸರಿಟ್ಟಿದ್ದಾರಂತೆ. ಮನೆಯಲ್ಲಿ ಇದೇ ಹೆಸರಿನಿಂದ ಕರೆಯಲಾಗುತ್ತಿದೆಯಂತೆ. ಮಗನಿಗೆ ಹೆಸರಿಟ್ಟಿರುವ ಬಗ್ಗೆ ಕರೀನಾ ಹಾಗೂ ಸೈಫ್ ಯಾವುದೇ ಮಾಹಿತಿ ನೀಡಿಲ್ಲ.ಮತ್ತೊಂದು ಮೂಲದ ಪ್ರಕಾರ ಸೈಫ್ ಅಲಿ ಖಾನ್ ಅವರ ತಂದೆ ಹೆಸರನ್ನೇ 2ನೇ ಮಗುವಿಗೆ ಇಡಲು ಈ ದಂಪತಿ ನಿರ್ಧರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.ಕರೀನಾ ಕಪೂರ್ ಅವರು ಮೊದಲ ಮಗನಿಗೆ ಭಾರತವನ್ನು ಲೂಟಿ ಮಾಡಿದ್ದ ದಾಳಿಕೋರನ ಹೆಸರನ್ನು ಇಟ್ಟಿದ್ದಾರೆ ಎಂದು ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗಿನಲ್ಲಿ ರೆಡ್ ಆಲರ್ಟ್!