Publish Date: Thu, 02 Sep 2021 (16:44 IST)
Updated Date: Thu, 02 Sep 2021 (16:45 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ದಂಪತಿ ಪುತ್ರ ಜ್ಯೂನಿಯರ್ ಚಿರು ಎಂದೇ ಇದುವರೆಗೆ ಎಲ್ಲರಿಗೂ ಚಿರಪರಿಚಿತ. ಮುದ್ದು ಮಗನಿಗೆ ಸರ್ಜಾ ಫ್ಯಾಮಿಲಿ ಈಗ ಹೆಸರು ಇಡಲು ತೀರ್ಮಾನಿಸಿದೆ.
ನಾಳೆ ಜ್ಯೂನಿಯರ್ ಚಿರು ಹೆಸರು ಬಹಿರಂಗಪಡಿಸುತ್ತಿರುವುದಾಗಿ ಚಿಕ್ಕಪ್ಪ ಧ್ರುವ ಸರ್ಜಾ ಘೋಷಿಸಿದ್ದಾರೆ. ವಿಶೇಷ ವಿಡಿಯೋ ಮೂಲಕ ಜ್ಯೂನಿಯರ್ ಚಿರು ಹೆಸರು ಪ್ರಕಟಿಸುತ್ತಿರುವುದಾಗಿ ಧ್ರುವ ಮಾಹಿತಿ ನೀಡಿದ್ದಾರೆ.
ಇದುವರೆಗೆ ಜ್ಯೂನಿಯರ್ ಚಿರುವನ್ನು ಮುದ್ದು ಹೆಸರುಗಳಿಂದ ಕರೆಯುತ್ತಿದ್ದೆವು. ಈಗ ಅವನ ನಿಜವಾದ ಹೆಸರು ಹೇಳುವ ಕಾಲ ಬಂದಿದೆ ಎಂದು ಧ್ರುವ ಹೇಳಿದ್ದಾರೆ. ಜ್ಯೂನಿಯರ್ ಚಿರು ಹೆಸರು ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.