Publish Date: Fri, 28 Aug 2020 (23:32 IST)
Updated Date: Fri, 28 Aug 2020 (23:37 IST)
ಸಿನಿಮಾ ನಟಿಯೊಬ್ಬರು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಕೈಲಾಸ ದೇಶ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ.
ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪ ಸೇರಿದಂತೆ ಹಲವು ಕೇಸ್ ಗಳು ದಾಖಲಾಗಿವೆ.
ಭಾರತ ಬಿಟ್ಟು ಎಸ್ಕೇಪ್ ಆಗಿರುವ ನಿತ್ಯಾನಂದ ಸ್ವಾಮಿ, ಕೈಲಾಸ ಹೆಸರಿನ ದೇಶ ಕಟ್ಟಿಕೊಂಡಿದ್ದಾನೆ ಎನ್ನಲಾಗಿದ್ದು, ಆ ದೇಶಕ್ಕೆ ಭೇಟಿ ನೀಡಬೇಕೆಂಬ ಆಸೆಯನ್ನು ತಮಿಳು ನಟಿ ಮೀರಾ ಮಿಥುನ್ ಹೊರಹಾಕಿದ್ದಾರೆ.
ಟೀಕೆ ಮಾಡಿದಷ್ಟೂ ನಿತ್ಯಾನಂದ ಬಲಿಷ್ಠರಾಗುತ್ತಿದ್ದಾರೆ. ಅವರ ಕೈಲಾಸ ದೇಶಕ್ಕೆ ಬೇಗನೆ ಹೋಗಬೇಕು ಎಂದು ಅನಿಸುತ್ತಿದೆ ಎಂದು ನಟಿ ಮೀರಾ ಮಿಥುನ್ ತಿಳಿಸಿದ್ದಾರೆ.