ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ನಟಿ ರಿಯಾ ಚಕ್ರವರ್ತಿಯನ್ನು ಬಂಧನ ಮಾಡಬೇಕು.
ಹೀಗಂತ ನಟ ಸುಶಾಂತ್ ಸಿಂಗ್ ರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಬಲವಾಗಿ ಆಗ್ರಹ ಮಾಡಿದ್ದಾರೆ.
ನಟ ಸುಶಾಂತ್ ಸಿಂಗ್ ಗೆ ಯಾವುದೇ ದುಶ್ಚಟಗಳು ಇರಲಿಲ್ಲ. ಸುಶಾಂತ್ ಗೆ ಗೊತ್ತಿಲ್ಲದಂತೆ ಡ್ರಗ್ಸ್ ಸೇವನೆ ಮಾಡಿಸಿರುವ ಆರೋಪದಲ್ಲಿ ನಟಿ ರಿಯಾಳನ್ನು ಬಂಧನ ಮಾಡಬೇಕೆಂದು ಆಗ್ರಹ ಮಾಡಲಾಗಿದೆ.
ಇದೇ ವೇಳೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಧ್ಯಮಗಳ ಮೂಲಕ ನಟಿ ರಿಯಾ ಮಾಡುತ್ತಿದ್ದಾಳೆ ಎಂದು ಶ್ವೇತಾ ಸಿಂಗ್ ಕೀರ್ತಿ ದೂರಿದ್ದಾರೆ.