ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಸುಧೀಂದ್ರ ಈಗ ಸ್ಯಾಂಡಲ್ ವುಡ್ ನ ಭವಿಷ್ಯದ ತಾರೆ ಎಂದು ಭರವಸೆ ಮೂಡಿಸಿದ್ದಾರೆ.
ಮೊನ್ನೆಯಷ್ಟೇ ನಿರಂಜನ್ ಅಭಿನಯದ ಸೂಪರ್ ಸ್ಟಾರ್ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಆ ಟೀಸರ್ ಈಗ ಮೂರೂವರೆ ಲಕ್ಷ ವ್ಯೂ ಪಡೆದು ಮುನ್ನುಗ್ಗುತ್ತಿದೆ. ಎಲ್ಲಕ್ಕಿಂತ ಹೆಚ್ಚು ಈ ಟೀಸರ್ ನೋಡಿದವರು ಸ್ಯಾಂಡಲ್ ವುಡ್ ಗೆ ಒಬ್ಬ ಸ್ಟೈಲಿಶ್ ಹೀರೋ ಸಿಕ್ಕಿದ್ದಾನೆ ಎನ್ನುತ್ತಿದ್ದಾರೆ.
ಮೊದಲ ಸಿನಿಮಾ ಇನ್ನೂ ಬಿಡುಗಡೆಯಾಗುವ ಮೊದಲೇ ಮೂರು ಸಿನಿಮಾಗಳು ನಿರಂಜನ್ ಕೈಯಲ್ಲಿವೆ. ಸಿನಿಮಾ ರಂಗಕ್ಕೆ ಬರುವ ಮೊದಲು ಚೆನ್ನಾಗಿಯೇ ತಯಾರಿ ಮಾಡಿಕೊಂಡು ಬಂದಿರುವ ನಿರಂಜನ್ ಗೆ ಚಿಕ್ಕಪ್ಪ ಉಪೇಂದ್ರ ಗೈಡೆನ್ಸ್ ಕೂಡಾ ಇದೆ. ಹೀಗಾಗಿ ಮುಂದೊಂದು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡುವ ಭರವಸೆ ಮೂಡಿಸಿದ್ದಾರೆ.