Publish Date: Sun, 22 Aug 2021 (08:53 IST)
Updated Date: Sun, 22 Aug 2021 (09:16 IST)
ಹೈದರಾಬಾದ್: ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಪೂಜಾ ನಿರ್ಮಾಪಕರಿಗೆ ಹೊರೆಯಾಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಪ್ರತಿ ಸಿನಿಮಾಗೆ ಅವರು 3 ಕೋಟಿಯಷ್ಟು ಸಂಭಾವನೆ ಪಡೆಯುತ್ತಾರಂತೆ. ಅದಲ್ಲದೆ, ಬೇರೆ ಬೇರೆ ಖರ್ಚುಗಳನ್ನು ಸೇರಿಸಿ ನಿರ್ಮಾಪಕರಿಗೆ ಹೊರೆಯಾಗುತ್ತಿದ್ದಾರೆ ಎಂದು ನಟಿ ರೋಜಾ ಪತಿ ಆರ್ ಕೆ ಸೆಲ್ವಮಣಿ ಆರೋಪ ಮಾಡಿದ್ದಾರೆ.
ಆರಂಭದಲ್ಲಿ ಪೂಜಾಗೆ ಒಬ್ಬ ಸಹಾಯಕನಿದ್ದ. ಆದರೆ ಈಗ 12 ಜನ ಸಹಾಯಕರಿದ್ದಾರೆ. ಅವರ ಹಿಂದೆ ದೊಡ್ಡ ದಂಡೇ ಬರುತ್ತದೆ. ಅವರಿಗೆಲ್ಲಾ ನಿರ್ಮಾಪಕರೇ ಹಣ ಖರ್ಚು ಮಾಡಬೇಕು. ಎಲ್ಲರಿಗೂ ಉಳಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಸೆಲ್ವಮಣಿ ಆರೋಪ ಮಾಡಿದ್ದಾರೆ.