Publish Date: Sat, 21 Aug 2021 (10:11 IST)
Updated Date: Sat, 21 Aug 2021 (10:33 IST)
ಹೈದರಾಬಾದ್: ಇಂದಿನ ಕಾಲದಲ್ಲಿ ಒಂದು ಸಿನಿಮಾ ಹಿಟ್ ಆದರೆ ಸ್ಟಾರ್ ಡಂ ಏಕ್ ದಮ್ ಹೆಚ್ಚಾಗುತ್ತದೆ. ಕೆಲವರು ಇದನ್ನು ತಲೆಗೆ ಮೆತ್ತಿಕೊಂಡು ಮೆರೆದಾಡಿದರೆ, ಮತ್ತೆ ಕೆಲವರು ತಾವು ಬೆಳೆದು ಬಂದ ಹಾದಿ ಮರೆಯುವುದಿಲ್ಲ.
ಆದರೆ ತೆಲುಗಿನಲ್ಲಿ ಎರಡು ಸಿನಿಮಾ ಹಿಟ್ ಆದ ಬಳಿಕ ಬೇರೆ ಭಾಷೆಗಳಲ್ಲೂ ಗುರುತಿಸಿಕೊಂಡ ಮೇಲೆ ವಿಜಯ್ ದೇವರಕೊಂಡ ಬೇಡಿಕೆಗಳೂ ಹೆಚ್ಚಾಗಿವೆ ಎನ್ನಲಾಗಿದೆ. ಸದ್ಯಕ್ಕೆ ವಿಜಯ್ ಲೈಗರ್ ಎನ್ನುವ ಸಿನಿಮಾ ಮಾಡುತ್ತಿದ್ದು, ಇದು ಬಾಲಿವುಡ್ ನಲ್ಲೂ ಬಿಡುಗಡೆಯಾಗಲಿದೆ.
ಇದರ ಜೊತೆಗೆ ಶಿವ ನಿರ್ವಣ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಮೊದಲು ಈ ಸಿನಿಮಾವನ್ನು ಕೇವಲ ತೆಲುಗಿನಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇದನ್ನೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂದು ವಿಜಯ್ ಬೇಡಿಕೆಯಿಟ್ಟಿದ್ದು, ಸ್ಟ್ರಿಪ್ಟ್ ನಲ್ಲಿ ಕೆಲವು ಬದಲಾವಣೆ ತಂದಿದ್ದರು. ಆದರೂ ಅವರಿಗೆ ತೃಪ್ತಿಯಾಗಿಲ್ಲ. ಅವರಿಗೆ ಬೇಕಾದಂತೆ ಸಿನಿಮಾ ತೆಗೆಯಬೇಕಾದರೆ ಬಜೆಟ್ ಕೂಡಾ ಹೊರೆಯಾಗಲಿದೆ. ಇದು ನಿರ್ಮಾಪಕರಿಗೆ ಇಷ್ಟವಿಲ್ಲ. ಇವರಿಬ್ಬರ ನಡುವೆ ನಿರ್ದೇಶಕರು ಬೇಸತ್ತಿದ್ದಾರೆ ಎನ್ನಲಾಗಿದೆ.