Publish Date: Sat, 21 Aug 2021 (09:20 IST)
Updated Date: Sat, 21 Aug 2021 (09:37 IST)
ಬೆಂಗಳೂರು: ಸ್ಟಾರ್ ಡಂ ಬಂದ ಮೇಲೆ ನಟರು ಫೋಟೋ ಶೂಟ್ ಮಾಡಿಸುವುದು ಕಡಿಮೆ. ಆದರೆ ಕಿಚ್ಚ ಸುದೀಪ್ ಈಗ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಹೊಸ ಫೋಟೋ ಶೂಟ್ ಫೋಟೋಗಳನ್ನು ಸುದೀಪ್ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಬಹಳ ದಿನಗಳ ನಂತರ ಫೋಟೋ ಶೂಟ್ ಮಾಡಿಸಿಕೊಂಡಿದ್ದೇನೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಸಖತ್ ಹ್ಯಾಂಡ್ಸಮ್ ಲುಕ್ ನಲ್ಲಿರುವ ಸುದೀಪ್ ಫೋಟೋ ನೋಡಿ ನೆಟ್ಟಿಗರೂ ಫಿದಾ ಆಗಿದ್ದಾರೆ.
ಇದರ ಜೊತೆಗೆ ವಿಕ್ರಾಂತ್ ರೋಣ ಸಿನಿಮಾ ಬಗ್ಗೆಯೂ ಅಪ್ ಡೇಟ್ ಕೊಟ್ಟಿದ್ದಾರೆ. ಲಾಕ್ ಡೌನ್ ನಿಂದಾಗಿ ಸಿನಿಮಾ ಕೆಲಸ ಸ್ಥಗಿತವಾಗಿತ್ತು. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮತ್ತೆ ಶುರುವಾಗಿದೆ ಎಂದಿದ್ದಾರೆ.