Select Your Language

Notifications

webdunia
webdunia
webdunia
webdunia

ರಾಮ್ ಚರಣ್ ಜೊತೆ ನಟಿಸುವ ಚಾನ್ಸ್ ರಶ್ಮಿಕಾಗೆ ಮಿಸ್ ಆಯ್ತು

ರಾಮ್ ಚರಣ್ ಜೊತೆ ನಟಿಸುವ ಚಾನ್ಸ್ ರಶ್ಮಿಕಾಗೆ ಮಿಸ್ ಆಯ್ತು
ಹೈದರಾಬಾದ್ , ಬುಧವಾರ, 7 ಜುಲೈ 2021 (12:22 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸ್ಟಾರ್ ಗಳ ಸಿನಿಮಾಗಳಿಗೆ ಹೀರೋಯಿನ್ ಆಗಿ ಒಂದಾದ ಮೇಲೊಂದರಂತೆ ಅವಕಾಶ ಗಿಟ್ಟಿಸುತ್ತಿದ್ದಾರೆ.


ಆದರೆ ಇದೀಗ ರಾಮ್ ಚರಣ್ ತೇಜ್ ಜೊತೆಗೆ ನಟಿಸಬೇಕಿದ್ದ ಚಾನ್ಸ್ ರಶ್ಮಿಕಾಗೆ ಮಿಸ್ ಆಗಿದೆ. ಈ ಅವಕಾಶ ಈಗ ಕಿಯಾರಾ ಅಡ್ವಾಣಿ ಪಾಲಾಗಿದೆ.

ರೋಬೋ ಖ್ಯಾತಿಯ ನಿರ್ದೇಶಕ ಶಂಕರ್ ಅವರ ಸಿನಿಮಾದಲ್ಲಿ ರಾಮ್ ಚರಣ್ ನಾಯಕರಾಗಿದ್ದು, ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾಗೆ ರಶ್ಮಿಕಾ ನಾಯಕಿ ಎಂದೇ ಹೇಳಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ರಶ್ಮಿಕಾ ಚಾನ್ಸ್ ಮಿಸ್ ಆಗಿದ್ದು, ಕಿಯಾರಾ ಪಾಲಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಲು ನಿರ್ಧರಿಸಿದೆ. ಸದ್ಯಕ್ಕೆ ರಶ್ಮಿಕಾ ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗಿನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ನನಗೆ ಬೆಸ್ಟ್ ಫ್ರೆಂಡ್ ಆದವಳು..! ಪ್ರೀತಿಯ ಬಗ್ಗೆ ರಮೇಶ್ ಅರವಿಂದ್ ಹೇಳಿಕೊಂಡಿದ್ದು ಹೀಗೆ