Publish Date: Fri, 01 Jan 2021 (11:00 IST)
Updated Date: Fri, 01 Jan 2021 (11:02 IST)
ಬೆಂಗಳೂರು: ಹೊಸ ವರ್ಷವೆಂದರೆ ಎಲ್ಲರಿಗೂ ವಿಶೇಷ ದಿನ. ಈ ವಿಶೇಷ ದಿನಕ್ಕೆ ಸ್ಯಾಂಡಲ್ ವುಡ್ ನ ಕೆಲವು ಹೊಸ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗಿವೆ.
ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ನಾಯಕರಾಗಿ ನಟಿಸಿರುವ ಸಲಗ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ನೊಂದಿಗೆ ಶುಭಾಶಯ ಕೋರಿದ್ದಾರೆ. ಇದಲ್ಲದೆ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಕೂಡಾ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಇದಲ್ಲದೆ, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ತೆಲುಗು ಟೀಸರ್ ಬಿಡುಡೆಯಾಗಿದೆ. ಈ ಮೂಲಕ ಈ ವರ್ಷ ಸ್ಟಾರ್ ಸಿನಿಮಾಗಳ ಸರಮಾಲೆಯೇ ಬರಲಿದೆ ಎಂದು ಸೂಚನೆ ಸಿಕ್ಕಿದೆ.