Publish Date: Fri, 01 Jan 2021 (09:40 IST)
Updated Date: Fri, 01 Jan 2021 (09:41 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಇಂದು ನಿಜಕ್ಕೂ ಹಬ್ಬವೇ. ಹೊಸ ವರ್ಷದ ಮೊದಲ ದಿನವೇ ಎಲ್ಲರೂ ಬಹುದಿನಗಳಿಂದ ಕಾಯುತ್ತಿದ್ದ ಯುವರತ್ನ ಸಿನಿಮಾ ರಿಲೀಸ್ ಡೇಟ್ ಇಂದು ಅನೌನ್ಸ್ ಆಗಲಿದೆ.
ಇಂದು ಮಧ್ಯಾಹ್ನ 12.34 ಕ್ಕೆ ಯುವರತ್ನ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದು ಹೊಸ ವರ್ಷದಂದು ಪವರ್ ಸ್ಟಾರ್ ಫ್ಯಾನ್ಸ್ ಗೆ ನಿಜಕ್ಕೂ ಹಬ್ಬದಷ್ಟು ಖುಷಿ ಕೊಟ್ಟ ವಿಷಯ. ಈ ಮೂಲಕ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಸ್ಟಾರ್ ಸಿನಿಮಾ ಬಿಡುಗಡೆಯಾಗುತ್ತಿರುವ ಸುದ್ದಿ ಕೇಳಿಬರುತ್ತಿದೆ.