Select Your Language

Notifications

webdunia
webdunia
webdunia
webdunia

ಈ ಬಾರಿಯ ಕನ್ನಡ ಬಿಗ್‌ಬಾಸ್‌ಗೆ ಈಕೆಯೇ ಯೋಗ್ಯ ವ್ಯಕ್ತಿ ಎಂದ ನೆಟ್ಟಿಗರು

Hindutva activist Chaitra Kundapura

Sampriya

ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2024 (17:22 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ಸೀಸನ್ 11 ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿಯಿದ್ದು ದೊಡ್ಮನೆಗೆ ಎಂಟ್ರಿಯಾಗುವ ಸ್ಪರ್ಧಿಗಳ ಹೆಸರು ಕೆಲವೊಂದು ರಿವೀಲ್ ಆಗಿದೆ.

ಪ್ರತಿ ಭಾರಿಯೂ ಕಿರುತೆರೆ ನಟ ನಟಿಯರು, ರಾಜಕಾರಣಿಗಳು, ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿರುವವರು, ವಿವಾದದಿಂದ ಗುರುತಿಸಿಕೊಂಡಿರುವರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಬಿಗ್‌ಬಾಸ್ ಕನ್ನಡದ ವಿಚಾರ ಸ್ವರ್ಗ ಮತ್ತು ನರಕದ ಕಲ್ಪನೆಯಲ್ಲಿ ಪ್ರೋಮೋದಲ್ಲಿ ಕಟ್ಟಿ ಕೊಡಲಾಗಿದೆ. ಆದ್ದರಿಂದ ಈ ಬಾರಿಯ ಬಿಗ್‌ಬಾಸ್ ಮತ್ತುಷ್ಟು ಕುತೂಹಲ ಹೆಚ್ಚಿಸಿದೆ.

ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ಹಣ ವಂಚಿಸಿ, ಜೈಲು ಸೇರಿದ್ದ ಚೈತ್ರಾ ಕುಂದಾಪುರ ಕೂಡಾ ಬಿಗ್‌ಬಾಸ್‌ಗೆ ಎಂಟ್ರಿಯಾಗುತ್ತಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್ ಪೋಸ್ಟ್‌ ನೆಟ್ಟಿಗರು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಯೋಗ್ಯ ಸ್ಪರ್ಧಿ ಇವರು. ಜಯವಾಗಲಿ, ಅವಳ ಜೊತೆಗೆ ಶೋಭಕ್ಕನು ಇರ್ಲಿ ಅಲ್ವಾ ಎಂದು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಚೈತ್ರಾ ಕುಂದಾಪುರ ಬಿಗ್‌ಬಾಸ್‌ಗೆ ಬಂದ್ರೆ ಹೇಗೆ ಎಂಬ ಪೋಸ್ಟರ್‌ ಅನ್ನು ಶೇರ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಬಿಡುಗಡೆ ಸುಲಭವಲ್ಲ: ಕೋರ್ಟ್ ನಲ್ಲಿ ಇಂದು ಆಗಿದ್ದೇನು