Select Your Language

Notifications

webdunia
webdunia
webdunia
webdunia

ಜಗನ್ನಾಥ್ ಪೂರಿ ಗರಡಿಯಲ್ಲಿ ಮಳೆ ಹುಡುಗಿ ನೇಹಾಶೆಟ್ಟಿ

Neha shetty
ಬೆಂಗಳೂರು , ಸೋಮವಾರ, 25 ಸೆಪ್ಟಂಬರ್ 2017 (16:29 IST)
ಬೆಂಗಳೂರು:  ಮುಂಗಾರು ಮಳೆ 2 ಸಕ್ಸಸ್ ನಂತರ ಮಳೆ ಹುಡುಗಿ ನೇಹಾ ಶೆಟ್ಟಿ ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.

ಸಾಕಷ್ಟು ಯಶಸ್ವಿ ನಾಯಕ-ನಾಯಕಿಯರನ್ನ ಚಿತ್ರರಂಗಕ್ಕೆ ಪರಿಚಯಿಸಿದ ಪೂರಿ ಜಗನ್ನಾಥ್ ಈಗ ತಮ್ಮ ಪುತ್ರ ಆಕಾಶ್ ಪೂರಿಯನ್ನ ಫುಲ್ ಟೈಮ್ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಆಕಾಶ್ ಗೆ ನಾಯಕಿಯಾಗಿ ನೇಹಾ ಶೆಟ್ಟಿ ಆಯ್ಕೆಯಾಗಿದ್ದು, ಟಾಲಿವುಡ್ ನಲ್ಲಿ ನೇಹಾ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
webdunia

ರಾಮ್ ಚರಣ್ ತೇಜಾ ಅಭಿನಯದ `ಚಿರುತ’ ಚಿತ್ರದಲ್ಲಿ ಆಕಾಶ್ ಪೂರಿ ಬಾಲನಟನಾಗಿ ಗುರುತಿಸಿಕೊಂಡಿದ್ರು. ಇನ್ನು 2015ರಲ್ಲಿ ತೆರೆಕಂಡಿದ್ದ `ಆಂಧ‍್ರ ಪೋರಿ’ಯಲ್ಲಿ ಆಕಾಶ್ ಹಿರೋ ಆಗಿ ಮಿಂಚಿದ್ರು. ಇದೇ ಅಕ್ಟೋಬರ್ ನಲ್ಲಿ ಪೂರಿ ಹೊಸ ಚಿತ್ರದ ಶೂಟಿಂಗ್ ಶುರುವಾಗಲಿದ್ದು, 3 ತಿಂಗಳಲ್ಲಿ ಚಿತ್ರೀಕರಣ ಮುಗಿಸಲು ಪೂರಿ ಜಗನ್ನಾಥ್ ಆಲೋಚನೆ ಮಾಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾವಾಗಲಿದೆ ಕಪಿಲ್ ದೇವ್ ರ 1983 ರ ಸಾಹಸ