Publish Date: Wed, 26 Jul 2017 (15:43 IST)
Updated Date: Wed, 26 Jul 2017 (15:50 IST)
ಡ್ರಗ್ಸ್ ಹಗರಣದಲ್ಲಿ ಸಿಲುಕಿರುವ ತೆಲುಗು ನಟಿ ಚಾರ್ಮಿ ಕೌರ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಪೇದೆಯೊಬ್ಬ ನಟಿಯ ಮೈಕೈ ಮುಟ್ಟಿದ ಆರೋಪ ಕೇಳಿಬಂದಿದೆ. ಹೈದ್ರಾಬಾದ್`ನ ಅಬಕಾರಿ ಕಚೇರಿಗೆ ನಟಿ ವಿಚಾರಣೆ ಬಂದಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಸಂಬಂಧ ನಟಿ ಚಾರ್ಮಿ ದೂರು ದಾಖಲಿಸಿದ್ದಾರೆ.
ಬೆಳಗ್ಗೆ ನಟಿ ಚಾರ್ಮಿ ಕಾರಿಳಿದು ಅಬಕಾರಿ ಕಚೇರಿಗೆ ಎಂಟ್ರಿಯಾಗುತ್ತಿದ್ದಂತೆ ಸುತ್ತುವರೆದ ಪೊಲೀಸ್ ಪೇದೆಗಳ ಗುಂಪು ಕಚೇರಿಗೆ ಕರೆದೊಯ್ದಿದೆ. ಮೇನ್ ಗೇಟ್ ಪಾಸ್ ಆಗುತ್ತಿದ್ದಂತೆ ಪೇದೆಯೊಬ್ಬ ಚಾರ್ಮಿಗೆ ಮುಟ್ಟಬಾರದ ಜಾಗದಲ್ಲಿ ಮುಟ್ಟಿರುತ್ತಾನೆ. ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣ ಮತ್ತು ಟಿವಿಗಳಲ್ಲಿ ವೈರಲ್ ಆಗಿದೆ.
ಅಸಭ್ಯವಾಗಿ ವರ್ತಿಸಿದ ಪೇದೆಯನ್ನ ಶ್ರೀನಿವಾಸ್ ಎಮದು ಗುರ್ತಿಸಲಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಚಾರ್ಮಿ ಅಬಕಾರಿ ನಿರ್ದೇಶಕ ಅಕುನ್ ಸಭರ್ವಾಲ್`ಗೆ ದೂರು ನೀಡಿದ್ಧಾರೆ. ಈ ಮಧ್ಯೆ, ಕೋರ್ಟ್ ಆದೇಶದನ್ವಯ ಚಾರ್ಮಿಯನ್ನ ಮಹಿಳಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ವಿಡಿಯೋ ಮಾಡಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ