Publish Date: Thu, 14 Sep 2017 (13:17 IST)
Updated Date: Thu, 14 Sep 2017 (13:30 IST)
ಬಲಿಷ್ಠ ಪಾತ್ರಗಳ ಮೂಲಕ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ಬಿಕಿನಿ ಫೋಟೋ ಬಗ್ಗೆ ಟ್ವಿಟ್ಟರ್`ನಲ್ಲಿ ಟೀಕಿಸಿದ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ತಮ್ಮ ಮುಂಬರುವ ಜುಡ್ವಾ-2 ಚಿತ್ರದ ಆ ತೋಹ್ ನಹಿ ಚಿತ್ರದ ಪ್ರಮೋಶನ್ನಿಗಾಗಿ ಬಿಕಿನಿಯಲ್ಲಿದ್ದ 2 ಫೋಟೊಗಳನ್ನ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಆಕೆಯ ಬಿಕಿನಿ ಫೋಟೋ ನೋಡಿದ ಟ್ವಿಟ್ಟರಾತಿಯೊಬ್ಬನಿಗೆ ಅದೇನಾಯಿತೋ ಗೊತ್ತಿಲ್ಲ. ವ್ಯಂಗ್ಯವಾಗಿ ಉತ್ತರ ಕೊಟ್ಟಿದ್ದ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನೀನ್ಯಾಕೆ ಉಳಿದ ಬಟ್ಟೆಗಳನ್ನೂ ಬಿಚ್ಚಬಾರದು..? ಇದರಿಂದ ನಿನ್ನ ಸಹೋದರ ಹೆಮ್ಮೆಯಿಂದ ಬೀಗುತ್ಥಾನೆ ಎಂದು ಕುಟುಕಿ ಟ್ವೀಟ್ ಮಾಡಲಾಗಿತ್ತು.
ಈ ಟ್ವಿಟ್`ಗೆ ಅಷ್ಟೇ ಪರಿಣಾಮಕಾರಿಯಾಗಿ ಉತ್ತರಿಸಿರುವ ತಾಪ್ಸಿ ಪನ್ನು, ಸಾರಿ, ನನಗೆ ಸಹೋದರನಿಲ್ಲ. ಇದ್ದಿದ್ದರೆ ಅವನನ್ನ ಕೇಳಿ ನಿನಗೆ ತಿಳಿಸುತ್ತಿದ್ದೆ. ಆದರೆ, ಈಗ ನನ್ನ ತಂಗಿಯ ಪ್ರತಿಕ್ರಿಯೆ ಕೇಳಿ ಹೇಳಬಹುದು ಎಂದಿದ್ದಾರೆ.
ಈ ಹಿಂದೆ ಖ್ಯಾತ ನಿರ್ಧೇಶಕ ರಾಘವೇಂದ್ರ ರಾವ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಾಪ್ಸಿ, ಅವರ ಚಿತ್ರದ ಹಾಡುಗಳಲ್ಲಿ ನಟಿಯರ ಸೊಂಟದ ಮೇಲೆ ಹಣ್ಣುಗಳನ್ನ ಎಸೆಯುತ್ತಿದ್ದ ನಿರ್ದೇಶಕರು ನನ್ನ ಸೊಂಟದ ಮೇಲೆ ತೆಂಗಿನಕಾಯಿಯ ಹೋಳು ಎಸೆದಿದ್ದರು. ತೆಂಗಿನಕಾಯಿ ಎಸೆಯುವುದರಿಂದ ಅದೆಂತಹ ಗ್ಲಾ,ಮರ್ ಇದೆಯೋ ಗೊತ್ತಿಲ್ಲ ಎಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ