Publish Date: Mon, 25 Sep 2017 (09:36 IST)
Updated Date: Mon, 25 Sep 2017 (09:40 IST)
ಮುಂಬೈ: ಧೋನಿ, ಸಚಿನ್ ನಂತರ ಭಾರತದ ಇನ್ನೊಬ್ಬ ಮಹಾನ್ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಚರಿತ್ರೆ ಸಿನಿಮಾವಾಗಲಿದೆ.
ಬಾಲಿವುಡ್ ನಲ್ಲಿ ಕ್ರೀಡಾ ಕಥಾ ವಸ್ತುಗಳ ಸಿನಿಮಾಗಳನ್ನು ಮಾಡಿ ಹೆಸರುವಾಸಿಯಾಗಿರುವ ಕಬೀರ್ ಖಾನ್ ಈ ಸಿನಿಮಾ ಮಾಡಲಿದ್ದಾರೆ. ಹಾಗಿದ್ದರೆ ಕಪಿಲ್ ಪಾತ್ರ ಯಾರು ಮಾಡುತ್ತಾರೆ ಗೊತ್ತಾ? ರಣವೀರ್ ಸಿಂಗ್!
ಹೌದು. ರಣವೀರ್ ಕಪಿಲ್ ಪಾತ್ರ ನಿರ್ವಹಿಸಲಿದ್ದಾರೆ. ಈ ಸಿನಿಮಾದಲ್ಲಿ ವಿಶೇಷವಾಗಿ ಕಪಿಲ್ ಅವರ 1983 ರ ವಿಶ್ವಕಪ್ ಗೆಲುವಿನ ಸಾಹಸ ಹೈಲೈಟ್ ಆಗಲಿದೆಯಂತೆ. 1983 ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಣದಲ್ಲಿ ಕಪಿಲ್ ಪಡೆ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ವಿಶ್ವ ಚಾಂಪಿಯನ್ ಆಗಿದ್ದು ಇಂದಿಗೂ ಜನ ಮರೆತಿಲ್ಲ. ಅದನ್ನು ತೆರೆ ಮೇಲೆ ನೋಡಲು ಉತ್ಸುಕರಾಗಿದ್ದರೆ ಸ್ವಲ್ಪ ಸಮಯ ಕಾಯಲೇ ಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ