Publish Date: Fri, 28 Jul 2017 (10:27 IST)
Updated Date: Fri, 28 Jul 2017 (10:31 IST)
ಮುಂಬೈ: ಬಾಲಿವುಡ್ ಮೋಸ್ಟ್ ವಾಂಟೆಡ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಮ್ಮೆ ಒಂದಾಗಿದ್ದಾರೆ ಎಂದರೆ ಇನ್ನೊಮ್ಮೆ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎನ್ನುವ ಸುದ್ದಿ ಬರುತ್ತದೆ. ಅದೇನೇ ಇದ್ದರೂ ದೀಪಿಕಾ ಬಗ್ಗೆ ರಣವೀರ್ ನೀಡಿದ ಈ ಸರ್ಟಿಫಿಕೇಟ್ ಅಭಿಮಾನಿಗಳಿಗೆ ಕಚಗುಳಿ ಇಟ್ಟಂತಾಗಿದೆ.
ನೇಹಾ ದುಪಿಯಾ ಜತೆಗಿನ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಗೆ ಉತ್ತರಿಸಿದ ರಣವೀರ್ ‘ನನಗೆ ಅನಿಸುವ ಮಟ್ಟಿಗೆ ಬಾಲಿವುಡ್ ನಲ್ಲಿ ಸದ್ಯಕ್ಕೆ ಬೆಸ್ಟ್ ಕಿಸ್ಸರ್ ಎಂದರೆ ದೀಪಿಕಾ’ ಎಂದು ಕಾಂಪ್ಲಿಮೆಂಟ್ ಕೊಟ್ಟಿದ್ದಾನೆ.
ಇತ್ತೀಚೆಗಷ್ಟೇ ಇಬ್ಬರೂ ರಣವೀರ್ ಬರ್ತ್ ಡೇ ನಿಮಿತ್ತ ರಾತ್ರೋ ರಾತ್ರಿ ಕಾರಿನಲ್ಲಿ ಸುತ್ತಾಡಿದ್ದು ಎಲ್ಲರಿಗೂ ಗೊತ್ತಾಗಿತ್ತು. ಇದೀಗ ತನ್ನ ಮನದೆನ್ನೆಯ ಚುಂಬನವನ್ನು ನೆನೆದು ಬಾಯಿ ಚಪ್ಪರಿಸಿಕೊಂಡಿದ್ದಾನೆ ಈ ಬಾಲಿವುಡ್ ಬಾಯ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ