Select Your Language

Notifications

webdunia
webdunia
webdunia
webdunia

ರಜನೀಕಾಂತ್ ಕಬಾಲಿಯೊಂದಿಗೆ ಪೈಪೋಟಿಗಿಳಿದ ನಂದಮೂರಿ ಅಖಂಡ ಚಿತ್ರ

ರಜನೀಕಾಂತ್ ಕಬಾಲಿಯೊಂದಿಗೆ ಪೈಪೋಟಿಗಿಳಿದ ನಂದಮೂರಿ ಅಖಂಡ ಚಿತ್ರ
ಚೆನ್ನೈ , ಭಾನುವಾರ, 25 ಏಪ್ರಿಲ್ 2021 (10:42 IST)
ಚೆನ್ನೈ : ನಂದಮೂರಿ ಬಾಲಕೃಷ್ಣ ಅವರು ಪ್ರಸ್ತುತ ಬೋಯಪತಿ ಶ್ರೀನು ಅವರೊಂದಿಗೆ ಮುಂಬರುವ ಆ್ಯಕ್ಷನ್ ಚಿತ್ರ ‘ಅಖಂಡ’ದಲ್ಲಿ ನಟಿಸುತ್ತಿದ್ದಾರೆ. ಇದರ  ಚಿತ್ರೀಕರಣ ಭಾರೀ ವೇಗದಲ್ಲಿ ನಡೆಯುತ್ತಿದೆ. ಪ್ರಸ್ತುತ ತಂಡವು ಕ್ಲೈಮ್ಯಾಕ್ಸ್ ಎಪಿಸೋಡ್ ಅನ್ನು ಡಬ್ ಮಾಡುತ್ತಿದೆ.

ಈ ನಡುವೆ ಕೆಲವು ದಿನಗಳ ಹಿಂದೆ ಅಖಂಡ ನಿರ್ಮಾಪಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಬಾಲಕೃಷ್ಣ ಅಗೋರಿ ವೇಷದಲ್ಲಿ ಕಂಡುಬಂದಿದ್ದಾರೆ. ಇದೀಗ ಈ ಟೀಸರ್ 35 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. 

ಆ ಮೂಲಕ ಬಾಲಕೃಷ್ಣ ಅವರು ಸೂಪರ್ ಸ್ಟಾರ್ ರಜನೀಕಾಂತ್ ಅವರ 37 ಮಿಲಿಯನ್ ವೀಕ್ಷಣೆ ಪಡೆದ ಕಬಾಲಿ ದಾಖಲೆಯನ್ನು ಮುರಿಯಲು ಹೊರಟಿದ್ದಾರೆ. ಬಾಲಕೃಷ್ಣ ಅವರ ಅಭಿಮಾನಿಗಳು ಈ ಗುರಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಸಾಯಬೇಡಿ, ತಿನ್ನಲು ಅನ್ನ ಸಿಗದೇ ಸಾಯ್ತೀರಿ: ಜಗ್ಗೇಶ್ ಹಿಡಿಶಾಪ