Publish Date: Mon, 04 Jan 2021 (09:24 IST)
Updated Date: Mon, 04 Jan 2021 (09:26 IST)
ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಲವ್ ಮಾಕ್ ಟೈಲ್ ಖ್ಯಾತಿಯ ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಫಾರ್ ಆರ್ ಜಿಎನ್ ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.
ಉಡುಪಿಯ ಕಡಲ ತೀರದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಚಿತ್ರತಂಡ ಒಟ್ಟಾಗಿ ಫೋಟೋ ತೆಗೆಸಿಕೊಂಡು ಎರಡನೇ ಹಂತಕ್ಕೆ ಸಿದ್ಧರಾಗಿರುವುದಾಗಿ ಹೇಳಿಕೊಂಡಿದೆ. ಈ ಸಿನಿಮಾವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದು, ನವೀನ್ ರಾವ್ ನಿರ್ಮಿಸುತ್ತಿದ್ದಾರೆ.