Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನ ಪತಿ ಚಿರು ಸರ್ಜಾ ನೆನೆಸಿಕೊಂಡ ಮೇಘನಾ ರಾಜ್

ಹುಟ್ಟುಹಬ್ಬದ ದಿನ ಪತಿ ಚಿರು ಸರ್ಜಾ ನೆನೆಸಿಕೊಂಡ ಮೇಘನಾ ರಾಜ್
ಬೆಂಗಳೂರು , ಮಂಗಳವಾರ, 3 ಮೇ 2022 (07:50 IST)
ಬೆಂಗಳೂರು: ನಟಿ ಮೇಘನಾ ರಾಜ್ ಗೆ ಇಂದು ಜನ್ಮದಿನದ ಸಂಭ್ರಮ. ಈ ವಿಶೇಷ ದಿನಕ್ಕೆ ಮೇಘನಾ ತಮ್ಮ ಪತಿ ಚಿರು ಸರ್ಜಾರನ್ನು ನೆನೆಸಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಚಿರು  ಜೊತೆಗಿನ ಸುಂದರ ಕ್ಷಣದ ಫೋಟೋವೊಂದನ್ನು ಪ್ರಕಟಿಸಿರುವ ಮೇಘನಾ ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದಾರೆ.

ನಾನು ದೇವರ ಮೇಲೆ ನಂಬಿಕೆಯಿಟ್ಟಿರುವುದು ಇದು ಒಂದೇ ಕಾರಣಕ್ಕೆ. ಮೇಲೆ ಹೋಗಿರುವ ನಿನಗೆ ನಮ್ಮಿಬ್ಬರಿಗೆ ಒಳಿತು ಮಾಡಲು ಆ ದೇವರು ಶಕ್ತಿಯಾಗಿರುತ್ತಾರೆಂಬ ನಂಬಿಕೆ ಕಾರಣಕ್ಕೆ ಎಂದು ಮೇಘನಾ ಬರೆದುಕೊಂಡಿದ್ದಾರೆ.

ಚಿರು ಸರ್ಜಾ ಹೋದ ಮೇಲೆ ಪುತ್ರ ರಾಯನ್ ಆಗಮನದ ಬಳಿಕ ಮೇಘನಾ ಇದೀಗ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಭೈರಾಗಿ ಹಾಡು ಇಂದು ರಿಲೀಸ್