Select Your Language

Notifications

webdunia
webdunia
webdunia
webdunia

ಮೇನಕಾ ಇರಾನಿ ಇನ್ನಿಲ್ಲ: ಮಗಳು ಫರಾ ಖಾನ್‌ರನ್ನು ಸಂತೈಸಿದ ಶಾರುಖ್ ಖಾನ್

ಮೇನಕಾ ಇರಾನಿ ಇನ್ನಿಲ್ಲ: ಮಗಳು ಫರಾ ಖಾನ್‌ರನ್ನು ಸಂತೈಸಿದ ಶಾರುಖ್ ಖಾನ್

Sampriya

ಮುಂಬೈ , ಶನಿವಾರ, 27 ಜುಲೈ 2024 (15:47 IST)
Photo Courtesy X
ಬಾಲಿವುಡ್‌ನ ಖ್ಯಾತ ನಿರ್ದೇಶಕಿ ಫರಾ ಖಾನ್ ಮತ್ತು ಸಾಜಿದ್ ಖಾನ್ ಅವರ ತಾಯಿ ಮೇನಕಾ ಇರಾನಿ ಅವರು ಜುಲೈ 26 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು.

ಈ ಸುದ್ದಿ ತಿಳಿಯುತ್ತಿದ್ದ ಹಾಗೇ ಬಾಲಿವುಡ್‌ನ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರು ಅಗಲಿದ ಮೇನಕಾ ಅವರ ಅಂತಿಮ ದರ್ಶನ ಪಡೆದರು. ಅದಲ್ಲದೆ ಹಿಂದಿ ಚಿತ್ರ ಗಣ್ಯರು ಮೇನಕಾ ಇರಾನಿ ಅವರ ಅಂತಿಮ ದರ್ಶನವನ್ನು ಪಡೆದರು.

ಈ ವೇಳೆ ಶಾರುಖ್ ಖಾನ್ ಅವರು ಫರಾ ಖಾನ್ ಅವರನ್ನು ಸಂತೈಸಿದರು. ಮಗಳು ಸುಹಾನಾ ಖಾನ್, ಪೂಜಾ ದದ್ಲಾನಿ ಕೂಡ ಅವರೊಂದಿಗೆ ಇದ್ದರು.

79 ವರ್ಷದ ಮೇನಕಾ ಇರಾನಿ ಅವರಿಗೆ ನಿನ್ನೆ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಕೆಲ ದಿನಗಳ ಹಿಂದೆಯಷ್ಟೇ ಫರಾ ಖಾನ್ ಅವರು ತಮ್ಮ ತಾಯಿ ಬಹು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ಕೆಲವು ದಿನಗಳಲ್ಲಿ ಈ ಹೃದಯ ವಿದ್ರಾಹಕ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಲ್ಲೂರಿನ ಪವರ್ ಫುಲ್ ಪ್ರಸಾದ ದರ್ಶನ್ ಗೆ ತಲುಪಿಸಲಿರುವ ಪತ್ನಿ ವಿಜಯಲಕ್ಷ್ಮಿ