Select Your Language

Notifications

webdunia
webdunia
webdunia
webdunia

ಈ ಯಂಗ್ ಪ್ಲೇಯರ್ ಟಿ20 ವಿಶ್ವಕಪ್ ನಲ್ಲಿ ಭಾರತದ ಪರ ಆಡಬೇಕೆಂದು ಶಾರುಖ್ ಖಾನ್ ಆಸೆ

Shah Rukh Khan

Krishnaveni K

ಮುಂಬೈ , ಮಂಗಳವಾರ, 30 ಏಪ್ರಿಲ್ 2024 (14:39 IST)
ಮುಂಬೈ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಗೆ ಇನ್ನೂ ಭಾರತ ತಂಡದ ಆಯ್ಕೆ ನಡೆದಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಆಯ್ಕೆ ಪ್ರಕ್ರಿಯೆ ನಿಧಾನವಾಗುತ್ತಲೇ ಇದೆ.

ಇದೀಗ ಐಪಿಎಲ್ 2024 ಜಾರಿಯಲ್ಲಿದ್ದು, ಕೆಕೆಆರ್ ತಂಡದ ಮಾಲಿಕ ಶಾರುಖ್ ಖಾನ್ ಭಾರತ ತಂಡದಲ್ಲಿ ಈ ಯುವ ಕ್ರಿಕೆಟಿಗ ಆಯ್ಕೆಯಾಗಬೇಕು ಎಂಬುದು ನನ್ನ ವೈಯಕ್ತಿಕ ಆಸೆ ಎಂದಿದ್ದಾರೆ. ಹಾಗಿದ್ದರೆ ಶಾರುಖ್ ಖಾನ್ ಇಂಪ್ರೆಸ್ ಮಾಡಿದ ಆ ಕ್ರಿಕೆಟಿಗ ಯಾರು ಎಂದು ನೋಡೋಣ.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂದರ್ಶನ ವೇಳೆ ಶಾರುಖ್ ಖಾನ್ ‘ದೇಶಕ್ಕಾಗಿ ಅನೇಕ ಅದ್ಭುತ ಪ್ರತಿಭೆಗಳು ಆಡುತ್ತಿದ್ದಾರೆ. ನಾನು ನಿಜವಾಗಿಯೂ ರಿಂಕು ಸಿಂಗ್ ಮತ್ತು ಕೆಲವು ಯುವ ಆಟಗಾರರು ವಿಶ್ವಕಪ್ ಆಡುವುದನ್ನು ನೋಡಲು ಬಯಸುತ್ತೇನೆ. ರಿಂಕು ಭಾರತ ತಂಡಕ್ಕೆ ಆಯ್ಕೆಯಾಗಲಿ ಎಂಬುದು ನನ್ನ ವೈಯಕ್ತಿಕ ಬಯಕೆ. ಆತ ಆಯ್ಕೆಯಾದರೆ ನನಗೆ ತುಂಬಾ ಖುಷಿಯಾಗುತ್ತದೆ’ ಎಂದಿದ್ದಾರೆ.

ರಿಂಕು ಸಿಂಗ್ ಐಪಿಎಲ್ ನಲ್ಲಿ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡದ ಪರ ಆಡುತ್ತಾರೆ. ರಿಂಕು ಕಳೆದ ಸೀಸನ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದ ಟೀಂ ಇಂಡಿಯಾ ಟಿ20 ಸರಣಿಗಳಿಗೂ ಆಯ್ಕೆಯಾಗಿದ್ದರು. ಭಾರತ ತಂಡದಲ್ಲೂ ಅವರ ಪ್ರದರ್ಶನ ಗಮನಾರ್ಹವಾಗಿತ್ತು. ಆದರೆ ಈಗ ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಗುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್ ಪಡೆಗೆ ಇಂದು ಮುಂಬೈ ವಿರುದ್ಧ ಮಹತ್ವದ ಪಂದ್ಯ