Select Your Language

Notifications

webdunia
webdunia
webdunia
webdunia

ಐಪಿಎಲ್ ಗೆದ್ದ ಕೆಕೆಆರ್ ಮಾಲಿಕ ಶಾರುಖ್ ಖಾನ್ ಗೆ ಸಿಗುವ ಹಣವೆಷ್ಟು

Shah Rukh Khan IPL

Krishnaveni K

ಚೆನ್ನೈ , ಮಂಗಳವಾರ, 28 ಮೇ 2024 (11:27 IST)
Photo Credit: X
ಚೆನ್ನೈ: ಐಪಿಎಲ್ 2024 ರಲ್ಲಿ ಫೈನಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಯಿತು. ಈ ಗೆಲುವಿನ ಬಳಿಕ ತಂಡದ ಮಾಲಿಕರು ಎಷ್ಟು ಹಣ ಪಡೆಯುತ್ತಾರೆ ಗೊತ್ತಾ?

ಐಪಿಎಲ್ ಗೆದ್ದ ತಂಡಕ್ಕೆ ಬಹುಮಾನ ರೂಪದಲ್ಲಿ 20 ಕೋಟಿ ರೂ. ನಗದು ಸಿಗುತ್ತದೆ. ರನ್ನರ್ ಅಪ್ ಆದ ತಂಡ 13 ಕೋಟಿ ರೂ. ಜೇಬಿಗಿಳಿಸುತ್ತದೆ. ಆದರೆ ತಂಡದ ಮಾಲಿಕರು ಗಳಿಸುವ ಹಣ ಇದರ ನಾಲ್ಕೈದು ಪಟ್ಟು ಹೆಚ್ಚಾಗಿರುತ್ತದೆ.

ಐಪಿಎಲ್ ಗೆದ್ದ ತಂಡದ ಮಾಲಿಕರಿಗೆ 150 ಕೋಟಿ ರೂ.ಗಳಷ್ಟು ಆದಾಯ ಬರುತ್ತದೆ. ಕೆಕೆಆರ್ ತಂಡದಲ್ಲಿ ಶಾರುಖ್ ಖಾನ್ ಮತ್ತು ನಟಿ ಜ್ಯೂಹಿ ಚಾವ್ಲಾ ದಂಪತಿ ಜಂಟಿಯಾಗಿ ಮಾಲಿಕತ್ವ ಹೊಂದಿದ್ದಾರೆ. ಶಾರುಖ್ ಪಾಲು ಶೇ.55 ರಷ್ಟಿದೆ.

ಹೀಗಾಗಿ ಶಾರುಖ್ ಈ ಐಪಿಎಲ್ ಗೆಲುವಿನೊಂದಿಗೆ ಸರಿಸುಮಾರು 60-70 ಕೋಟಿ ರೂ. ಪಾಲು ಪಡೆಯಲಿದ್ದಾರೆ ಎನ್ನಲಾಗಿದೆ. ಸಿನಿಮಾ, ಪ್ರೊಡಕ್ಷನ್ ಸಂಸ್ಥೆ, ಜಾಹೀರಾತುಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಶಾರುಖ್ ಗೆ ಐಪಿಎಲ್ ಕೂಡಾ ಅತ್ಯುತ್ತಮ ಆದಾಯ ನೀಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಫೈನಲ್ ಬಳಿಕ ಗೌತಮ್ ಗಂಭೀರ್ ಜೊತೆ ಜಯ್ ಶಾ ಗಂಭೀರ ಚರ್ಚೆ