ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಆಂತರಿಕ ಭದ್ರತಾ ದಳ ತನಿಖೆಗಿಳಿದಿದ್ದು, ನಟ ಲೂಸ್ ಮಾದ ಯೋಗಿಯನ್ನು ಕೂಡಾ ವಿಚಾರಣೆಗೊಳಪಡಿಸಲಾಗಿದೆ.
ವಿಚಾರಣೆ ವೇಳೆ ನಟ ಯೋಗಿ ನಾನು ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದಾಗ ದುಶ್ಚಟಗಳ ಸಹವಾಸ ಮಾಡಿದ್ದೆ. ಆದರೆ ಯಾವುದೇ ಡ್ರಗ್ ಪೆಡ್ಲರ್ ಗಳ ಜತೆ ನನಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಇನ್ನು, ಯೋಗಿಗೆ ಈಗಾಗಲೇ ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಣಿ ಜತೆಗಿನ ಸ್ನೇಹ ಅವರಿಗೆ ಮತ್ತಷ್ಟು ಕಂಟಕವಾಗಿದೆ. ಯೋಗಿ ಅಲ್ಲದೆ, ನಟಿ ಪ್ರೇಮಾ ಸಹೋದರ, ಬಿಗ್ ಬಾಸ್ ಸ್ಪರ್ಧಿ ಕ್ರಿಕೆಟಿಗ ಅಯ್ಯಪ್ಪ ಕೂಡಾ ಐಎಸ್ ಡಿ ತನಿಖೆಗೊಳಗಾಗಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!