Publish Date: Sun, 22 Oct 2023 (11:19 IST)
Updated Date: Sun, 22 Oct 2023 (09:21 IST)
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಲಿಯೋ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಸಿನಿಮಾ 100 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಚಿತ್ರತಂಡ ಎರಡನೇ ಪಾರ್ಟ್ ಮಾಡಲಿದೆಯಾ ಎಂಬ ಕುತೂಹಲ ಅಭಿಮಾನಿಗಳಿಗೆ ಕಾಡಿದೆ. ಲಿಯೋ ಸಿನಿಮಾ ಬಿಡುಗಡೆಗೆ ಮುನ್ನ ನಿರ್ದೇಶಕ ಲೋಕೇಶ್ ಕನಗರಾಜುಗೆ ಈ ಪ್ರಶ್ನೆ ಕೇಳಲಾಗಿತ್ತು.
ಅದಕ್ಕೆ ಉತ್ತರಿಸಿದ್ದ ಅವರು ಲಿಯೋ ಸಿನಿಮಾ ನೋಡಿದರೆ ನಿಮಗೆ ಉತ್ತರ ಸಿಗುತ್ತದೆ ಎಂದಿದ್ದರು. ಇದೀಗ ಲಿಯೋ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರತಂಡ ಪಾರ್ಟ್ 2 ಮಾಡುವುದು ಖಚಿತ ಎನ್ನುತ್ತಿದ್ದಾರೆ. ಇದು ವಿಜಯ್ ಫ್ಯಾನ್ಸ್ ಗೆ ಬಂಪರ್ ಸುದ್ದಿಯಾಗಿದೆ.