ಬೆಂಗಳೂರು: ಅಕ್ಟೋಬರ್ 19 ರಂದು ಕನ್ನಡ ಮತ್ತು ತಮಿಳು ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ಸ್ಟಾರ್ ಗಳ ಬಹುನಿರೀಕ್ಷಿತ ಸಿನಿಮಾಗಳು ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಸಂಭ್ರಮ.
									
			
			 
 			
 
 			
			                     
							
							
			        							
								
																	ಬೆಂಗಳೂರಿನಲ್ಲಿ ತಮಿಳು ಸಿನಿಮಾಗಳು ಅದರಲ್ಲೂ ದಳಪತಿ ವಿಜಯ್ ಸಿನಿಮಾಗೆ ವಿಶೇಷ ಬೇಡಿಕೆಯಿರುತ್ತದೆ. ಆದರೆ ಅದೇ ದಿನ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಕೂಡಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆಯಿದೆ.
									
										
								
																	ಆದರೆ ಅಡ್ವಾನ್ಸ್ ಬುಕಿಂಗ್ ನಲ್ಲಿ ಲಿಯೋ ಕೊಂಚ ಮುಂದಿದೆ. ಕೆಲವು ಮಾರ್ನಿಂಗ್ ಶೋಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ಹೀಗಾಗಿ ಲಿಯೋ ಎದುರು ಶಿವಣ್ಣನ ಘೋಸ್ಟ್ ಗೆಲ್ಲಬೇಕೆಂದರೆ ಕನ್ನಡಿಗರು ಮನಸ್ಸು ಮಾಡಬೇಕಿದೆ. ಈ ಇಬ್ಬರು ಸ್ಟಾರ್ ಗಳ ಸಿನಿಮಾಗಳಲ್ಲಿ ಯಾರಿಗೆ ಗೆಲುವು ಎಂಬ ಕುತೂಹಲ ಸಿನಿ ಪ್ರೇಕ್ಷರಲ್ಲಿದೆ.