ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಮಾಡುತ್ತಿದ್ದ ಕೆಲಸ ನೋಡಿ ದಂಗಾದ ಕಿರಿಕ್ ಕೀರ್ತಿ!

ಬುಧವಾರ, 8 ಜುಲೈ 2020 (09:22 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕೊರೋನಾ, ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುತ್ತಿರುವ ಎಷ್ಟೋ ಸಿನಿ ಕಾರ್ಮಿಕರಿದ್ದಾರೆ. ಅವರಿಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡುತ್ತಿರುವ ಕೆಲಸಗಳನ್ನು ಕಿರಿಕ್ ಕೀರ್ತಿ ಹಂಚಿಕೊಂಡಿದ್ದಾರೆ.


ಪುನೀತ್ ಭೇಟಿಗೆ ತೆರಳಿದ್ದ ಕಿರಿಕ್ ಕೀರ್ತಿಗೆ ಆ ಸಮಯದಲ್ಲಿ ಅವರು ಮಾಡುತ್ತಿದ್ದ ಕೆಲಸ ನೋಡಿ ಬೆರಗಾಗಿದೆಯಂತೆ. ಪುನೀತ್ ನಿಜಕ್ಕೂ ದೊಡ್ಮನೆ ಹುಡುಗನೇ ಎಂದು ಕಿರಿಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದಾರೆ.

ತಾನು ಅವರ ಜತೆ ಮಾತನಾಡುತ್ತಿರುವಾಗಲೇ ಸಿನಿ ಕಾರ್ಮಿಕರ ಅಸೋಸಿಯೇಷನ್ ಗೆ ಚೆಕ್ ಕಳುಹಿಸಿದ್ರು. ಜತೆಗೆ ಕೆಲಸ ಕಳೆದುಕೊಂಡಿರುವ ಸಿನಿ ಕಾರ್ಮಿಕರಿಗೆ ಕೆಲಸ ಸಿಗಲು ಮಾಡುತ್ತಿರುವ ಕೆಲಸಗಳನ್ನು ಹಂಚಿಕೊಂಡರು. ನಮ್ಮ ಸಣ್ಣ ಪುಟ್ಟ ಕೆಲಸಗಳಿಗೆಲ್ಲಾ ಸಾಥ್ ಕೊಟ್ಟರು. ನಿಜಕ್ಕೂ ರಾಜಕುಮಾರ. ಹಮ್ಮಿಲ್ಲ, ಗತ್ತಿಲ್ಲ, ನಮ್ಮ ಹೆಮ್ಮೆಯ ಅಪ್ಪು ಸರ್ ಎಂದು ಕಿರಿಕ್ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಿರುವಿಲ್ಲದ ಬೇಸರದಲ್ಲಿದ್ದ ಮೇಘನಾ ರಾಜ್ ಮುಖದಲ್ಲಿ ಮತ್ತೆ ನಗು ತಂದಿದ್ದು ಯಾರು ಗೊತ್ತಾ?!