ಬರ್ತ್ ಡೇ ಸಂಭ್ರಮದಲ್ಲಿ ರಿಷಬ್ ಶೆಟ್ಟಿ: ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು

ಮಂಗಳವಾರ, 7 ಜುಲೈ 2020 (10:04 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಬಂದ ಮೋಸ್ಟ್ ಕ್ರಿಯೇಟಿವ್ ನಿರ್ದೇಶಕರ ಸಾಲಿನಲ್ಲಿ ರಿಷಬ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಇಂದು ರಿಷಬ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.


ಈ ವರ್ಷ ರಿಷಬ್ ಫುಲ್ ಬ್ಯುಸಿಯಾಗಿದ್ದರು. ಅವರ ನಿರ್ದೇಶನದಲ್ಲಿ ರುದ್ರ ಪ್ರಯಾಗ ಎನ್ನುವ ಮಹತ್ವಾಂಕಾಂಕ್ಷಿ ಸಿನಿಮಾವೊಂದನ್ನು ಸೆಟ್ಟೇರಿತ್ತು. ಆದರೆ ಕೊರೋನಾ ಕಾರಣದಿಂದ ರುದ್ರಪ್ರಯಾಗ ಚಿತ್ರೀಕರಣ ಮುಂದೂಡಿಕೆಯಾಗಿದೆ.

ಹಾಗಿದ್ದರೂ ರಿಷಬ್ ಸುಮ್ಮನೇ ಕೂತಿಲ್ಲ. ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ‘ಬೆಲ್ ಬಾಟಂ’ನಲ್ಲಿ ನಾಯಕನಾಗಿ ಗೆದ್ದ ರಿಷಬ್ ಗರುಡಗಮನ ವೃಷಭ ವಾಹನ, ಕೌ ಬಾಯ್ ಕೃಷ್ಣ, ಹರಿ ಕತೆ ಅಲ್ಲ ಗಿರಿಕತೆ, ನಾತುರಾಮ್,  ಬೆಲ್ ಬಾಟಂ ಭಾಗ 2, ಅಂಟಗೋನಿ ಶೆಟ್ಟಿ ಇತ್ಯಾದಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇವೆಲ್ಲವೂ ಟೈಟಲ್ ನೋಡಿದರೇ ಒಂದಕ್ಕಿಂತ ಒಂದು ವಿಭಿನ್ನ ಪಕ್ಕಾ ಮನರಂಜನಾ ಶೈಲಿಯ ಸಿನಿಮಾಗಳು ಎಂಬುದು ಗ್ಯಾರಂಟಿಯಾಗುತ್ತದೆ. ಆದರೆ ಕೊರೋನಾದಿಂದಾಗಿ ಈ ಎಲ್ಲಾ ಸಿನಿಮಾಗಳು ತಡವಾಗಬಹುದು. ಆದರೆ ರಿಷಬ್ ರ ಈ ಎಲ್ಲಾ ಸಿನಿಮಾಗಳಿಗೂ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ ಎಂದರೆ ತಪ್ಪಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಹುಚ್ಚ’ ಸಿನಿಮಾಗೆ 19: ನೆನಪುಗಳಿಗೆ ಜಾರಿದ ಕಿಚ್ಚ ಸುದೀಪ್