ಬೇಬಿ ಮಾ.. ಎಂದು ಚಿರುಗೆ ಮತ್ತೆ ಭಾವುಕ ಸಂದೇಶ ಬರೆದ ಮೇಘನಾ ರಾಜ್

ಮಂಗಳವಾರ, 7 ಜುಲೈ 2020 (10:46 IST)
ಬೆಂಗಳೂರು: ಪತಿ ಚಿರಂಜೀವಿ ಸರ್ಜಾ ಸಾವಿನ ಆಘಾತದಿಂದ ಹೊರಬಾರದ ಮೇಘನಾ ರಾಜ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋವೊಂದನ್ನು ಹಾಕಿಕೊಂಡು ಭಾವುಕರಾಗಿ ಸಂದೇಶ ಬರೆದಿದ್ದಾರೆ.


ಚಿರು ಸರ್ಜಾ ನಗುತ್ತಿರುವ ಫೋಟೋವೊಂದನ್ನು ಹಾಕಿಕೊಂಡಿರುವ ಮೇಘನಾ ‘ನನ್ನ ಮಿಸ್ಟರ್ ಹ್ಯಾಂಡ್ಸಮ್’ ಎಂದು ಹೇಳಿರುವುದಲ್ಲದೇ ನೀನು ಯಾವತ್ತೂ ನನ್ನೊಳಗೇ ಇರುವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಚಿರು-ಮೇಘನಾ ಗೆಳೆಯರ ಬಳಗ ಮೇಘನಾರನ್ನು ಭೇಟಿಯಾಗಿ ಸಾಂತ್ವಾನ ನೀಡಿದ್ದಾರೆ. ಆ ಫೋಟೋವನ್ನೂ ಹಾಕಿಕೊಂಡಿರುವ ಮೇಘನಾ ಇವರೆಲ್ಲರೂ ನನ್ನ ಕುಟುಂಬ ಎಂದು ಬರೆದುಕೊಂಡಿದ್ದಾರೆ.

ನನ್ನ ನಗುವಿಗೆ ನೀನೇ ಕಾರಣ, ನೀನು ನನಗೆ ನೀಡಿರುವುದು ಅತ್ಯಮೂಲ್ಯ ಉಡುಗೊರೆ. ಪ್ರತಿ ದಿನವನ್ನೂ ನೀನು ಇಷ್ಟಪಟ್ಟಂತೇ ಕಳೆಯುವೆ. ಲವ್ ಯೂ ಬೇಬಿ ಮಾ ಎಂದು ಮೇಘನಾ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬರ್ತ್ ಡೇ ಸಂಭ್ರಮದಲ್ಲಿ ರಿಷಬ್ ಶೆಟ್ಟಿ: ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು