ಚಿರುವಿಲ್ಲದ ಬೇಸರದಲ್ಲಿದ್ದ ಮೇಘನಾ ರಾಜ್ ಮುಖದಲ್ಲಿ ಮತ್ತೆ ನಗು ತಂದಿದ್ದು ಯಾರು ಗೊತ್ತಾ?!

ಮಂಗಳವಾರ, 7 ಜುಲೈ 2020 (10:59 IST)
ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾದ ಬಳಿಕ ಮೇಘನಾ ರಾಜ್ ದುಃಖದಲ್ಲೇ ಇದ್ದಾರೆ. ಅವರು ಹೊರಗೆಲ್ಲೂ ಕಾಣಿಸಿಕೊಳ್ಳುತ್ತಲೂ ಇಲ್ಲ. ಆದರೆ ಬಹಳ ದಿನಗಳ ನಂತರ ಅವರ ಮುಖದಲ್ಲಿ ನಗು ತಂದವರು ಯಾರು ಗೊತ್ತೇ?


ಚಿರಂಜೀವಿ ಮತ್ತು ಮೇಘನಾಗೆ ದೊಡ್ಡ ಗೆಳೆಯರ ಬಳಗವೇ ಇದೆ. ಅವರ ಅತ್ಯಾಪ್ತ ವಲಯದಲ್ಲಿ ನಿರ್ದೇಶಕ ಪನ್ನಗಾಭರಣ, ನಟ ಪ್ರಜ್ವಲ್ ದೇವರಾಜ್ ದಂಪತಿ ಮುಂತಾದವರೆಲ್ಲಾ ಇದ್ದಾರೆ. ಈ ಗೆಳೆಯರ ಗ್ಯಾಂಗ್ ಏನೇ ಖುಷಿಯಿದ್ದರೂ ಜತೆಯಲ್ಲಿ ಆಚರಿಸಿಕೊಳ್ಳುತ್ತಿತ್ತು.

ಇದೀಗ ಚಿರು ಸಾವಿನ ಬಳಿಕ ಮೊದಲ ಬಾರಿಗೆ ಮೇಘನಾರನ್ನು ಭೇಟಿ ಮಾಡಿದ ಈ ಗ್ಯಾಂಗ್ ಅವರ ನಿವಾಸದಲ್ಲಿ ಚಿರು ಫೋಟೋ ಎದುರು ಕೂತು ಮೇಘನಾ ಜತೆಗೆ ಕೂತು ನಗುತ್ತಾ ಪೋಸ್ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಘನಾ ಕೂಡಾ ಕೆಲವು ಕ್ಷಣ ದುಃಖ ಮರೆತು ನಗು ಚೆಲ್ಲಿದ್ದು ಕಂಡುಬಂದಿದೆ. ಅಲ್ಲದೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮೇಘನಾ ಗೆಳೆಯರನ್ನು ತಮ್ಮ ಕುಟುಂಬದವರು ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೇಬಿ ಮಾ.. ಎಂದು ಚಿರುಗೆ ಮತ್ತೆ ಭಾವುಕ ಸಂದೇಶ ಬರೆದ ಮೇಘನಾ ರಾಜ್