ಬೆಂಗಳೂರು: ಚೊಚ್ಚಲ ಸಿನಿಮಾ ‘ಅಮರ್’ ಇಂದು ರಾಜ್ಯಾದ್ಯಂತ ತೆರೆ ಕಂಡ ಬೆನ್ನಲ್ಲೇ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಚಿತ್ರರಂಗದ ಸ್ಟಾರ್ ನಟರು ಶುಭ ಹಾರೈಸುತ್ತಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ ಸ್ವತಃ ವಿಡಿಯೋ ಸಂದೇಶ ಮೂಲಕ ಅಭಿಗೆ ಬೆಸ್ಟ್ ಆಫ್ ಲಕ್ ಹೇಳಿದ್ದರು. ಇದೀಗ ಕಿಚ್ಚ ಸುದೀಪ್ ಕೂಡಾ ತಮ್ಮ ಪ್ರೀತಿಯ ಅಂಬಿ ಮಾಮನ ಮಗನಿಗೆ ಶುಭ ಹಾರೈಸಿದ್ದಾರೆ.
‘ನಿನಗೆ ಸಿನಿಮಾ ಹೊಸತಲ್ಲವಾಗಿರಬಹುದು. ಆದರೆ ಮೊದಲ ಹೆಜ್ಜೆ ಎನ್ನುವುದು ಎಲ್ಲರಿಗೂ ವಿಶೇಷವಾಗಿರುತ್ತದೆ. ನನಗೆ ಗೊತ್ತು ಆ ಮಹಾನ್ ಚೇತನ ಮೇಲಿನಿಂದ ನಿನಗೆ ಹಾರೈಸುತ್ತಿರುತ್ತದೆ. ಇನ್ನೂ ಎತ್ತರಕ್ಕೆ ಬೆಳಿ. ನಿನಗೆ ನನ್ನ ಶುಭ ಹಾರೈಕೆಗಳು’ ಎಂದು ಕಿಚ್ಚ ಟ್ವೀಟ್ ಮಾಡಿ ಹಾರೈಸಿದ್ದಾರೆ.