Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಅಭಿಮಾನಿಗಳ ಜೊತೆ ಕಿಚ್ಚನ ಮಾತುಕತೆ

ಬರ್ತ್ ಡೇ ದಿನ ಅಭಿಮಾನಿಗಳ ಜೊತೆ ಕಿಚ್ಚನ ಮಾತುಕತೆ
ಬೆಂಗಳೂರು , ಗುರುವಾರ, 2 ಸೆಪ್ಟಂಬರ್ 2021 (08:46 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ. ಕೊರೋನಾ ಕಾರಣದಿಂದ ಅವರು ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ.

 

ಆದರೆ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗಿ ಖುಷಿಕೊಡಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಕಿಚ್ಚ ಸುದೀಪ್ ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಂ ಖಾತೆಯ ಮೂಲಕ ಲೈವ್ ಆಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಕಾರ್ಯಕ್ರಮವನ್ನು ವಿಶೇಷ ವ್ಯಕ್ತಿಯೊಬ್ಬರು ಆಂಕರಿಂಗ್ ಮಾಡಲಿದ್ದಾರೆ ಎಂಬ ಸುದ್ದಿಯಿದೆ.

ಇನ್ನು, ಇದಲ್ಲದೆ, ಇಂದು ವಿಕ್ರಾಂತ್ ರೋಣ ಸಿನಿಮಾ ತಂಡ ಕೂಡಾ ತಮ್ಮ ಸಿನಿಮಾದ ವಿಶೇಷ ವಿಡಿಯೋ ಮೂಲಕ ಕಿಚ್ಚನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲಿದೆ. ಇದಲ್ಲದೆ ಅಭಿಮಾನಿಗಳು ಕಿಚ್ಚನ ಕುರಿತಾದ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಇದು ಕಿಚ್ಚನಿಗೂ ಖುಷಿಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ವಿಶ್ ಮಾಡಿದ ‘ಗೋಲ್ಡನ್ ಮ್ಯಾನ್’ ನೀರಜ್ ಚೋಪ್ರಾ