Publish Date: Wed, 01 Sep 2021 (09:12 IST)
Updated Date: Wed, 01 Sep 2021 (09:16 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
ಇದೀಗ ಸ್ವತಃ ಸಿಎಂ ಬೊಮ್ಮಾಯಿ ಸ್ಯಾಂಡಲ್ ವುಡ್ ಸ್ಟಾರ್ ನಟ ತಮ್ಮನ್ನು ಭೇಟಿಯಾದ ಉದ್ದೇಶವೇನೆಂದು ಬಹಿರಂಗಪಡಿಸಿದ್ದಾರೆ.
ನಮ್ಮ ಕನ್ನಡ ಚಿತ್ರರಂಗದ ಪ್ರೀತಿಯ ನಟ ಕಿಚ್ಚ ಸುದೀಪ್ ಭೇಟಿಯಾಗಿದ್ದು ಖುಷಿಕೊಟ್ಟಿದೆ. ಚಿತ್ರರಂಗದ ಹಲವು ಸಮಸ್ಯೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ನಿಮ್ಮ ಭವಿಷ್ಯಕ್ಕೆ ನನ್ನ ಶುಭ ಹಾರೈಕೆಗಳು ಎಂದು ಸಿಎಂ ಹಾರೈಸಿದ್ದಾರೆ. ಇನ್ನು, ಸುದೀಪ್ ಕೂಡಾ ಸಿಎಂ ಮಾತಿಗೆ ಧನ್ಯವಾದ ಸಲ್ಲಿಸಿದ್ದಾರೆ.