Publish Date: Tue, 31 Aug 2021 (16:47 IST)
Updated Date: Tue, 31 Aug 2021 (16:48 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೇ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ಅವರನ್ನು ಅಭಿನಂದಿಸಿ ಆತ್ಮೀಯವಾಗಿ ಮಾಮ ಎಂದು ಕರೆದು ತಮ್ಮ ಆರಂಭದ ದಿನಗಳಲ್ಲಿ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದ ತಿಳಿಸಿದ್ದರು.
ಇದೇ ಆತ್ಮೀಯತೆಯಿಂದ ಅವರೀಗ ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ತಮ್ಮ ಬರ್ತ್ ಡೇಗೆ ಇನ್ನೆರಡು ದಿನಗಳಿರುವಾಗ ಈ ಭೇಟಿ ನಡೆಸಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.