Publish Date: Mon, 30 Aug 2021 (16:41 IST)
Updated Date: Mon, 30 Aug 2021 (16:42 IST)
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳು ಇಂದು ಫಿಲಂ ಚೇಂಬರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಡಾ.ರಾಜ್ ಅಭಿನಯದ ಹಲವು ಹಿಟ್ ಸಿನಿಮಾಗಳ ಟೈಟಲ್ ಗಳನ್ನು ಹೊಸ ಸಿನಿಮಾಗಳಿಗೆ ಮರುಬಳಕೆ ಮಾಡಲಾಗುತ್ತಿದೆ. ಇದರ ವಿರುದ್ಧ ಡಾ.ರಾಜ್ ಅಭಿಮಾನಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ.
ಇನ್ನು, ಮುಂದೆ ಡಾ.ರಾಜ್ ಸಿನಿಮಾಗಳ ಹೆಸರು ಬಳಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಭಿಮಾನಿಗಳ ಸಂಘ ಎಚ್ಚರಿಕೆ ನೀಡಿದೆ. ಇದಕ್ಕೆ ವಾಣಿಜ್ಯ ಮಂಡಳಿ ಕೂಡಾ ಒಪ್ಪಿಗೆ ನೀಡಿದೆ ಎನ್ನಲಾಗಿದೆ.