Select Your Language

Notifications

webdunia
webdunia
webdunia
webdunia

ಪ್ಯಾರಾಲಿಂಪಿಕ್ಸ್: ಗಳಿಸಿದ ಕಂಚಿನ ಪದಕ ಕಳೆದುಕೊಂಡ ವಿನೋದ್ ಕುಮಾರ್

ಪ್ಯಾರಾಲಿಂಪಿಕ್ಸ್: ಗಳಿಸಿದ ಕಂಚಿನ ಪದಕ ಕಳೆದುಕೊಂಡ ವಿನೋದ್ ಕುಮಾರ್
ಟೋಕಿಯೋ , ಸೋಮವಾರ, 30 ಆಗಸ್ಟ್ 2021 (16:25 IST)
ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ಈವೆಂಟ್ ನಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದ ಭಾರತದ ವಿನೋದ್ ಕುಮಾರ್ ಗೆ ಈಗ ಆಯೋಜಕರ ನಿಯಮ ಶಾಕ್ ತಂದಿದೆ.
Photo Courtesy: Google


ವಿನೋದ್ ಕುಮಾರ್ ಈಗ ತಾವು ಗಳಿಸಿದ ಪದಕವನ್ನು ಮರಳಿಸುವ ಪರಿಸ್ಥಿತಿ ಬಂದಿದೆ. ಪ್ಯಾರಾಲಿಂಪಿಕ್ ನಲ್ಲಿ ಭಾಗಿಯಾಗಲು ದೈಹಿಕ ನ್ಯೂನ್ಯತೆಗಳ ಕೆಲವು ಮಾನದಂಡಗಳಿವೆ. ಅದರಲ್ಲಿ ವಿನೋದ್ ಅನರ್ಹರಾಗಿದ್ದಾರೆ ಎಂಬ ಕಾರಣಕ್ಕೆ ಅವರು ಕಂಚಿನ ಪದಕವನ್ನು ಮರಳಿಸುವ ಪರಿಸ್ಥಿತಿ ಬಂದಿದೆ.

ವಿನೋದ್ ಎಫ್ 52 ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ವಿಭಾಗ ದುರ್ಬಲ ಮಾಂಸಖಂಡ, ಅವುಗಳ ಚಲನೆಯಲ್ಲಿ ವ್ಯತ್ಯಾಸವಿರುವವರಿಗೆ ಮತ್ತು ಕಾಲಿನ ಅಳತೆ ಅಸಮಾನರಾಗಿರುವವರಿಗೆ ಇರುವ ವಿಭಾಗವಾಗಿದೆ. ಆದರೆ ಈ ಅರ್ಹತೆಗಳನ್ನು ತಲುಪುವಲ್ಲಿ ವಿನೋದ್ ಅಸಮರ್ಥರಾಗಿದ್ದಾರೆ ಎಂಬ ಕಾರಣಕ್ಕೆ ಅವರ ಪದಕವನ್ನು ವಾಪಸ್ ಪಡೆಯಲು ಸಂಘಟಕರು ತೀರ್ಮಾನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಪ್ಯಾರಲಿಂಪಿಕ್ಸ್: ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದು ಇತಿಹಾಸ ಬರೆದ ಶೂಟರ್ ಅವನಿ!