ಬೆಂಗಳೂರು: ಲವ್ ಯೂ ರಚ್ಚು ಚಿತ್ರೀಕರಣ ವೇಳೆ ದುರಂತ ಸಾವನ್ನಪ್ಪಿದ್ದ ಫೈಟರ್ ವಿವೇಕ್ ಕುಟುಂಬಕ್ಕೆ ನಿರ್ಮಾಪಕ ಗುರುದೇಶ್ ಪಾಂಡೆ 5 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ.
ನಿರೀಕ್ಷಣಾ ಜಾಮೀನಿನಲ್ಲಿರುವ ಗುರುದೇಶ್ ಪಾಂಡೆ ವಿವೇಕ್ ಮನೆಗೆ ಭೇಟಿ ನೀಡಿ ಅವರ ತಾಯಿಗೆ ಚೆಕ್ ವಿತರಿಸಿದ್ದಾರೆ. ಉಳಿದ 5 ಲಕ್ಷ ರೂ.ಗಳನ್ನು ಚಿತ್ರ ಬಿಡುಗಡೆಯಾದ ಮೇಲೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ವಿವೇಕ್ ಸಹೋದರನ ವಿದ್ಯಾಭ‍್ಯಾಸಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರಂತೆ.
ರಾಮನಗರ ಬಳಿ ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಅಚಾತುರ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ವಿವೇಕ್ ಸಾವನ್ನಪ್ಪಿದ್ದರು.