Select Your Language

Notifications

webdunia
webdunia
webdunia
webdunia

ಕಿಚ್ಚನ ಬರ್ತ್ ಡೇಗೆ ಅಭಿಮಾನಿಗಳ ಭರ್ಜರಿ ಸಿದ್ಧತೆ

ಕಿಚ್ಚನ ಬರ್ತ್ ಡೇಗೆ ಅಭಿಮಾನಿಗಳ ಭರ್ಜರಿ ಸಿದ್ಧತೆ
ಬೆಂಗಳೂರು , ಬುಧವಾರ, 1 ಸೆಪ್ಟಂಬರ್ 2021 (11:07 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ನಾಳೆ ಜನ್ಮದಿನದ ಸಂಭ್ರಮ. ಕಿಚ್ಚ ಈ ಬಾರಿ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳದಿದ್ದರೂ ಅವರ ಅಭಿಮಾನಿಗಳು ಮಾತ್ರ ಅದ್ಧೂರಿಯಾಗಿಯೇ ಬರ್ತ್ ಡೇ ಆಚರಿಸಲು ತೀರ್ಮಾನಿಸಿದ್ದಾರೆ.


ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಮುಂತಾದ ಸಾಮಾಜಿಕ ಕೆಲಸಗಳು ನಡೆಯಲಿವೆ. ಅದರ ಹೊರತಾಗಿ ಅಭಿಮಾನಿಗಳೇ ಕಿಚ್ಚನಿಗಾಗಿ ಹಾಡು ತಯಾರಿಸಿದ್ದು, ಇದು ನಾಳೆ ಬಿಡುಗಡೆಯಾಗುತ್ತಿದೆ.

ಇದಲ್ಲದೆ, ಶರಣ್ ಹುಲ್ಲೂರು ಬರೆದ ಕಿಚ್ಚ ಸುದೀಪ್ ಬಯೋಗ್ರಫಿಯ ಅಡಿಯೋ ಅವತರಣಿಕೆ ನಾಳೆ ಬಿಡುಗಡೆಯಾಗುತ್ತಿದೆ. ಇದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನ್ ಆಚಾರ್ ಧ್ವನಿ ನೀಡಿದ್ದಾರೆ. ಇದರ ಜೊತೆಗೆ ವಿಕ್ರಾಂತ್ ರೋಣ ವಿಡಿಯೋ, ಕೋಟಿಗೊಬ್ಬ 3 ಪೋಸ್ಟರ್ ಬಿಡುಗಡೆಯಾಗುವುದು ಪಕ್ಕಾ. ಅದಲ್ಲದೆ, ಹೊಸ ಸಿನಿಮಾ ಅನೌನ್ಸ್ ಆಗಲಿದೆಯೇ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಮನೆ ನಿರ್ಮಾಣ ಹಿಂದೆ ಅಭಿ ರಾಜಕೀಯ ಲೆಕ್ಕಾಚಾರ?