Select Your Language

Notifications

webdunia
webdunia
webdunia
webdunia

ಸುಮಲತಾ ಮನೆ ನಿರ್ಮಾಣ ಹಿಂದೆ ಅಭಿ ರಾಜಕೀಯ ಲೆಕ್ಕಾಚಾರ?

ಸುಮಲತಾ ಮನೆ ನಿರ್ಮಾಣ ಹಿಂದೆ ಅಭಿ ರಾಜಕೀಯ ಲೆಕ್ಕಾಚಾರ?
ಮಂಡ್ಯ , ಬುಧವಾರ, 1 ಸೆಪ್ಟಂಬರ್ 2021 (09:48 IST)
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿರುವುದರ ಹಿಂದೆ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯ ಭವಿಷ್ಯದ ಲೆಕ್ಕಾಚಾರ ಅಡಗಿದೆಯೇ? ಹೀಗೊಂದು ಅನುಮಾನ ಹರಿದಾಡುತ್ತಿದೆ.


ಸುಮಲತಾ ಇದೀಗ ಸ್ವಕ್ಷೇತ್ರದ ಜನರಿಗೆ ಹತ್ತಿರವಾಗಲು ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಇದ್ದರೂ, ಒಳಗೊಳಗೇ ಇದರ ಹಿಂದೆ ಅಭಿಯನ್ನು ಇಲ್ಲಿಂದ ರಾಜಕೀಯಕ್ಕೆ ಕಣಕ್ಕಿಳಿಸುವ ಉದ್ದೇಶವೂ ಇದೆ ಎನ್ನಲಾಗುತ್ತಿದೆ.

 ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಂಡ್ಯದ ಸಂಸದೆಯಾಗಿರುವ ಸುಮಲತಾ ಈಗ ಮಂಡ್ಯ ರಾಜಕೀಯದಲ್ಲಿ ತಳವೂರಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲೇ ಪುತ್ರನಿಗೂ ರಾಜಕೀಯ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಇಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ರಿಲೀಸ್ ಮುಂದಕ್ಕೆ