Select Your Language

Notifications

webdunia
webdunia
webdunia
webdunia

ಮಂಡ್ಯದಲ್ಲಿ ಮನೆ ಕಟ್ಟಲು ಮುಂದಾದ ಸುಮಲತಾ : ಗುದ್ದಲಿ ಪೂಜೆ

ಮಂಡ್ಯದಲ್ಲಿ ಮನೆ ಕಟ್ಟಲು ಮುಂದಾದ ಸುಮಲತಾ : ಗುದ್ದಲಿ ಪೂಜೆ
ಮಂಡ್ಯ , ಬುಧವಾರ, 1 ಸೆಪ್ಟಂಬರ್ 2021 (08:25 IST)
ಮಂಡ್ಯ: ಅಂಬರೀಶ್ ತವರು ನೆಲೆವಾದ ಮಂಡ್ಯ ಜಿಲ್ಲೆಯಲ್ಲಿ ಮನೆ ನಿರ್ಮಾಣ ಮಾಡಲು ಸಂಸದೆ ಸುಮಲತಾ ಅಂಬರೀಶ್ ಮುಂದಾಗಿದ್ದಾರೆ. ಮನೆ ನಿರ್ಮಾಣದ ಗುದ್ದಲಿ ಪೂಜೆ ಇಂದು ನಡೆಯಲಿದ್ದು, ಸಂಸದರು ಇಂದು ಮಂಡ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಹಿಂದೆ ಅಂದ್ರೆ ಲೋಕಸಭಾ ಚುನಾವಣೆ ಗೆದ್ದ ವೇಳೆ ಸುಮಲಾತಾ ಅವರು ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಿ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಇಂದು ಮಂಡ್ಯಕ್ಕೆ ತೆರಳಲಿರುವ ಸಂಸದೆ ಬೆಳಗ್ಗೆ 10 ಗಂಟೆಗೆ ಗುದ್ದಲಿ ಪೂಜೆ ಹಮ್ಮಿಕೊಂಡಿದ್ದಾರೆ.
ಇನ್ನು ಮನೆ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ, ಅಭಿಷೇಕ್ ಅಂಬರೀಶ್, ನಟರಾದ ದರ್ಶನ್, ಯಶ್, ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬೊಮ್ಮಾಯಿ ಭೇಟಿಯಾದ ಕಿಚ್ಚ ಸುದೀಪ್