Select Your Language

Notifications

webdunia
webdunia
webdunia
webdunia

ಮನೆ ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್

ಕಿಚ್ಚ ಸುದೀಪ್
ಬೆಂಗಳೂರು: ನಟ ಕಿಚ್ಚ ಸುದೀಪ್ ಈಗ ಸಿನಿಮಾ ರಗಳೆಗಳೆಲ್ಲಾ ಬಿಟ್ಟು ಫ್ಯಾಮಿಲಿ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.


ಸುದೀಪ್ ತಮ್ಮ ಸಂಸಾರ ಸಮೇತ ತಮ್ಮ ಮನೆ ಮದುವೆಯ ಸಂಭ್ರಮದಲ್ಲಿದ್ದಾರೆ. ಸಹೋದರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ, ಸಹೋದರಿ ಸುಜಾತ ಸಂಜೀವ್, ಪುತ್ರಿ ಸಾನ್ವಿ ಸೇರಿದಂತೆ ಇಡೀ ಕುಟುಂಬ ವರ್ಗದವರೊಂದಿಗೆ ಕಾಲ ಕಳೆದಿದ್ದಾರೆ.

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಸುದೀಪ್ ತಮ್ಮ ಸಹೋದರಿ ಜೊತೆ ರಾಖಿ ಹಬ್ಬ ಆಚರಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಆರನೇ ಸಿನಿಮಾ ಇಂದು ಅನೌನ್ಸ್