Publish Date: Wed, 01 Sep 2021 (17:06 IST)
Updated Date: Wed, 01 Sep 2021 (17:08 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ನಾಳೆ ಜನ್ಮದಿನದ ಸಂಭ್ರಮ. ಜೊತೆಗೆ ವಿಕ್ರಾಂತ್ ರೋಣದ ವಿಶೇಷ ವಿಡಿಯೋ ಬಿಡುಗಡೆಯಾಗುತ್ತಿದೆ.
ಈ ವಿಶೇಷ ದಿನಕ್ಕೆ ಕಿಚ್ಚನಿಗೆ ವಿಶೇಷ ವ್ಯಕ್ತಿಯಿಂದ ಶುಭ ಹಾರೈಕೆ ಸಿಕ್ಕಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದ ನೀರಜ್ ಚೋಪ್ರಾ ಕಿಚ್ಚನಿಗೆ ಶುಭ ಹಾರೈಸಿದ್ದಾರೆ.
ನಿಮಗೆ ಮತ್ತು ನಿಮ್ಮ ಮುಂದಿನ ಸಿನಿಮಾ ಆಲ್ ದಿ ಬೆಸ್ಟ್ ಎಂದು ನೀರಜ್ ಸಂದೇಶ ನೀಡಿದ್ದಾರೆ. ಇನ್ನು, ಗೋಲ್ಡನ್ ಮ್ಯಾನ್ ಸಂದೇಶಕ್ಕೆ ಕಿಚ್ಚನೂ ಖುಷಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ.